arakshakaratimesmedia.com
ಜಿಲ್ಲಾ ಸುದ್ದಿಗಳು

ನನ್ನಂತೆ ಯತೀಂದ್ರನನ್ನೂ ಬೆಳೆಸಿ: ವರುಣಾ ಜನತೆಗೆ ಸಿಎಂ ಸಿದ್ದರಾಮಯ್ಯ ಭಾವುಕ ಮನವಿ

Share News

ಮೈಸೂರು: “ರಾಜಕೀಯವಾಗಿ ನನ್ನನ್ನು ಹೇಗೆ ಕೈಹಿಡಿದು ನಡೆಸಿದಿರೋ, ಹಾಗೆಯೇ ನನ್ನ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಆಶೀರ್ವದಿಸಿ ಬೆಳೆಸಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

​ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ವರಕೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಬೀರೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ರಾಜಕೀಯ ಬದ್ಧತೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, “ನನ್ನ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ ಮತ್ತು ಜನರ ಸೇವೆಯನ್ನು ಮುಂದುವರಿಸುತ್ತೇನೆ. ರಾಜಕೀಯ ಜೀವನದಲ್ಲಿ ನಾನು ಅನೇಕ ಸೋಲು-ಗೆಲುವುಗಳನ್ನು ಕಂಡಿದ್ದೇನೆ. ಆದರೆ, ಚುನಾವಣೆಯಲ್ಲಿ ಸೋತಾಗಲೂ ನಾನು ಎಂದಿಗೂ ಜನಸೇವೆಯಿಂದ ಹಿಂದೆ ಸರಿದಿಲ್ಲ,” ಎಂದು ಮಾರ್ಮಿಕವಾಗಿ ನುಡಿದರು.

ಆಡಳಿತಾತ್ಮಕ ಕಾರ್ಯದೊತ್ತಡದಿಂದ ಕ್ಷೇತ್ರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಸಿಎಂ, “ನನಗೆ ಕ್ಷೇತ್ರಕ್ಕೆ ಪದೇ ಪದೇ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಪರವಾಗಿ ಮಗ ಯತೀಂದ್ರ ಅವರು ಕ್ಷೇತ್ರಕ್ಕೆ ಬರುತ್ತಾರೆ. ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ. ನನ್ನನ್ನು ನೀವು ಹೇಗೆ ರಾಜಕೀಯವಾಗಿ ಬೆಳೆಸಿದ್ದೀರೋ, ಅದೇ ರೀತಿ ಯತೀಂದ್ರನನ್ನೂ ಬೆಳೆಸಬೇಕು,” ಎಂದು ವರುಣಾ ಮತದಾರರಲ್ಲಿ ವಿನಂತಿಸಿದರು.

ವರುಣಾ ಕ್ಷೇತ್ರದೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ತಾವು ಸದಾ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.


Share News

Related posts

ತಮಿಳುನಾಡಿನ ಪ್ರವಾಸಕ್ಕೆ ಮನೆಯವರು, ಕನ್ನ ಹಾಕಲು ಕಿಟಕಿಯೊಳಗೆ ನುಗ್ಗಿದ ಕಿರಾತಕರು, ವಿಶೇಷ ತಂಡ ರಚಿಸಿ ಹಿಡಿದ ಪೊಲೀಸರು

Arakshakara Times Media
3 hours ago

ಕೋರಮಂಗಲದಲ್ಲಿ ಅಣ್ಣ ಹಾಕಿದ ಮನೆಗೆ ಕನ್ನ, ಸಿ.ಇ.ಐ.ಆರ್ ತಂತ್ರಾಂಶದಿಂದ ಸಿಕ್ಕಿದ್ದು ಬರೋಬ್ರಿ 321 ಮೊಬೈಲ್ಸ್, ಇವು ಆಗ್ನೇಯ ವಿಭಾಗದ ರೋಚಕ ಕಾರ್ಯಾಚರಣೆಗಳು

Arakshakara Times Media
2 hours ago

ಅಕ್ರಮವಾಗಿ ಮಾರಕಾಸ್ತ್ರಗಳನ್ನಿಟ್ಟಿದ್ದ ಇಬ್ಬರು ರೌಡಿಗಳು ಅಂದರ್, ವಾರೆಂಟ್ ಇದ್ದರೂ ಡೋಂಟ್ ಕೇರ್ ಅಂತಿದ್ರು, ಬಿಸಿನೆಸ್ ಮಾಡಲು ಹೋಗಿ ಸಿಕ್ಕಿಬಿದ್ರು

Arakshakara Times Media
2 hours ago
Exit mobile version