Share News

ಕೋಲಾರ: ಮನೆಯ ಹಿಂಭಾಗದಲ್ಲಿ ಕಾನೂನುಬಾಹಿರವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಕೋಲಾರ ತಾಲೂಕಿನ ಹೊದಲವಾಡಿ ಗ್ರಾಮದಲ್ಲಿ ನಡೆದಿದೆ.

​ಹೊದಲವಾಡಿ ಗ್ರಾಮದ ನಿವಾಸಿ ಚಂದ್ರಪ್ರಕಾಶ್ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಮನೆಯ ಹಿಂಭಾಗದ ಜಾಗದಲ್ಲಿ ಯಾರಿಗೂ ತಿಳಿಯದಂತೆ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎನ್ನಲಾಗಿದೆ.

ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೋಲಾರ ಅಬಕಾರಿ ಡಿವೈಎಸ್ಪಿ ಶ್ರೀನಿವಾಸಮೂರ್ತಿ ಅವರ ನೇತೃತ್ವದ ತಂಡವು ಬುಧವಾರ ಹೊದಲವಾಡಿ ಗ್ರಾಮದ ಚಂದ್ರಪ್ರಕಾಶ್ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಸುಮಾರು 5 ರಿಂದ 7 ಅಡಿಗಳಷ್ಟು ಎತ್ತರಕ್ಕೆ ದಪ್ಪಗಾಗಿ ಬೆಳೆದು ನಿಂತಿದ್ದ 22 ಗಾಂಜಾ ಗಿಡಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

​ಆರೋಪಿ ಚಂದ್ರಪ್ರಕಾಶ್‌ನನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು, ಗಾಂಜಾ ಗಿಡಗಳನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ದಾಳಿಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

 


Share News