ಆನೇಕಲ್: ಪಟ್ಟಣದ ವಿವಿಧ ಮೆಡಿಕಲ್ ಶಾಪ್ಗಳಿಗೆ ಪಿಎಸ್ಐ ಮುನಿರತ್ನಮ್ಮ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಕಾರಣಕ್ಕೂ ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ಔಷಧಿಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೆಡಿಕಲ್ ಶಾಪ್ಗಳ ತೀವ್ರ ತಪಾಸಣೆ ಹಾಗೂ ಎಚ್ಚರಿಕೆ
ಆನೇಕಲ್ ಪಟ್ಟಣದಲ್ಲಿರುವ ವಿವಿಧ ಔಷಧ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಎಸ್ಐ ಮುನಿರತ್ನಮ್ಮ ಅವರು, ಮಾಲೀಕರಿಗೆ ಅಗತ್ಯ ಎಚ್ಚರಿಕೆಗಳನ್ನು ನೀಡಿದರು. ಪ್ರಾಥಮಿಕ ತಪಾಸಣೆ ಹಾಗೂ ವೈದ್ಯರ ಸೂಕ್ತ ಸಲಹೆ ಇಲ್ಲದೆ ಔಷಧಿಗಳನ್ನು ವಿತರಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳ ಬಗ್ಗೆ ಮೆಡಿಕಲ್ ಶಾಪ್ ಮಾಲೀಕರಿಗೆ ಮನವರಿಕೆ ಮಾಡಿಕೊಟ್ಟರು.
ಅಮಲಿನ ಔಷಧಿಗಳ ಮಾರಾಟಕ್ಕೆ ಬ್ರೇಕ್
ವಿಶೇಷವಾಗಿ ಇಂದಿನ ಯುವ ಜನತೆಯನ್ನು ದಾರಿ ತಪ್ಪಿಸುವ ಯಾವುದೇ ರೀತಿಯ ನಶೆ ಬರುವ ಅಥವಾ ಅಮಲಿನ ಔಷಧಗಳನ್ನು (Narcotic/Sedative drugs) ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ನೇರವಾಗಿ ಯಾರಿಗೂ ಮಾರಾಟ ಮಾಡಬಾರದು ಎಂದು ಅವರು ಕಡ್ದಾಯವಾಗಿ ತಾಕೀತು ಮಾಡಿದರು.
ಕಾನೂನು ಕ್ರಮದ ಎಚ್ಚರಿಕೆ
ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಅಥವಾ ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹ ಮೆಡಿಕಲ್ ಶಾಪ್ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೆ, ಅವರ ಪರವಾನಗಿ ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ದಿಢೀರ್ ತಪಾಸಣೆ ವೇಳೆ ಸ್ಥಳೀಯ ಪೊಲೀಸರು ಉಪಸ್ಥಿತರಿದ್ದರು.

Arakshakara Times Media
Related posts
