ಬೆಂಗಳೂರು (ಬಾಗಲಗುಂಟೆ): ಜಾಲಹಳ್ಳಿ ಕ್ರಾಸ್ನಿಂದ ಆಟೋದಲ್ಲಿ ಪ್ರಯಾಣಿಸುವಾಗ ಸುಮಾರು ₹40,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ತಪ್ಪಿ ಬಿಟ್ಟು ಬಂದಿದ್ದ ಮಹಿಳೆಗೆ, ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಳ್ಳಿ ಆಭರಣಗಳನ್ನು ಸುರಕ್ಷಿತವಾಗಿ ಮರಳಿಸಿರುವ ಶ್ಲಾಘನೀಯ ಘಟನೆ ನಡೆದಿದೆ.
ಘಟನೆಯ ವಿವರ:
ಮಲ್ಲಸಂದ್ರ ನಿವಾಸಿ ಶ್ರೀಮತಿ ವೆಲ್ಲಿ (ಕೋಂ ಕಿಟ್ಟಿ) ಎಂಬುವವರು ಜಾಲಹಳ್ಳಿ ಕ್ರಾಸ್ನಿಂದ ಆಟೋ ಹತ್ತಿ ತಮ್ಮ ನಿವಾಸವಿರುವ ಮಲ್ಲಸಂದ್ರಕ್ಕೆ ಬಂದಿದ್ದಾರೆ. ಈ ವೇಳೆ ಆಟೋದಲ್ಲೇ ಸುಮಾರು ₹40,000 ಮೌಲ್ಯದ ತಮ್ಮ ಬೆಳ್ಳಿ ವಸ್ತುಗಳನ್ನು ಮರೆತು ಬಿಟ್ಟು ಇಳಿದಿದ್ದರು. ಬಳಿಕ ವಸ್ತುಗಳು ಕಳೆದುಹೋಗಿರುವುದು ತಿಳಿಯುತ್ತಿದ್ದಂತೆಯೇ ಅವರು ತಕ್ಷಣ ಬಾಗಲಗುಂಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಧುಕುಮಾರ್ ಹಾಗೂ ಚೇತನ್ ಅವರು, ಸತತ ಪ್ರಯತ್ನ ನಡೆಸಿ ಸದರಿ ಆಟೋ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನನ್ನು ಬೆಳ್ಳಿ ವಸ್ತುಗಳ ಸಮೇತ ಠಾಣೆಗೆ ಕರೆತಂದು ಹಾಜರುಪಡಿಸಲಾಗಿದೆ.
ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಯ ಪಿಎಸ್ಐ (PSI) ಶ್ರೀ ಗಂಗಾಧರ್ ಅವರ ಸಮಕ್ಷಮದಲ್ಲಿ, ವಶಪಡಿಸಿಕೊಂಡ ₹40,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ವಾರಸುದಾರರಾದ ಶ್ರೀಮತಿ ವೆಲ್ಲಿ ಅವರಿಗೆ ಅಧಿಕೃತವಾಗಿ ಹಿಂತಿರುಗಿಸಲಾಯಿತು. ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆ ಮೂಲಕ ತಮ್ಮ ವಸ್ತುಗಳನ್ನು ಹುಡುಕಿಕೊಟ್ಟ ಬಾಗಲಗುಂಟೆ ಪೊಲೀಸರಿಗೆ ಸಂತ್ರಸ್ತ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆಟೋದಲ್ಲಿ ತಪ್ಪಿ ಬಿಟ್ಟು ಹೋಗಿದ್ದ ₹40,000 ಮೌಲ್ಯದ ಬೆಳ್ಳಿ ವಸ್ತುಗಳ ಶೀಘ್ರ ಪತ್ತೆ – ವಾರಸುದಾರರಿಗೆ ಹಸ್ತಾಂತರ!
Arakshakara Times Media
Related posts
