Share News

ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಮಹತ್ವದ ನಿರ್ಧಾರ ತಳೆದಿದ್ದು, ಇನ್ಮುಂದೆ ‘ಹಾಫ್ ಹೆಲ್ಮೆಟ್’ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

​ಅಪಘಾತಗಳ ಸಮಯದಲ್ಲಿ ಸವಾರರ ಪ್ರಾಣಕ್ಕೆ ಸುರಕ್ಷತೆ ನೀಡದ, ಕಳಪೆ ಮಟ್ಟದ ಹಾಫ್ ಹೆಲ್ಮೆಟ್‌ಗಳನ್ನು ಧರಿಸುವುದಕ್ಕೆ ಇಲಾಖೆ ಸಂಪೂರ್ಣ ಬ್ರೇಕ್ ಹಾಕಿದೆ.

​ISI/BIS ಮಾನದಂಡ ಕಡ್ಡಾಯ: ದಂಡದ ಎಚ್ಚರಿಕೆ

​ಗುಣಮಟ್ಟದ ಹೆಲ್ಮೆಟ್ ಕಡ್ಡಾಯ: ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ BIS (Bureau of Indian Standards) ಅಥವಾ ISI ಗುಣಮಟ್ಟದ ಮಾನದಂಡಗಳನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಮಾತ್ರ ಧರಿಸಬೇಕು.

​ನಿಯಮ ಉಲ್ಲಂಘಿಸಿದರೆ ದಂಡ: ಸುರಕ್ಷತಾ ಮಾನದಂಡವಿಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಸಾರಿಗೆ ಮತ್ತು ಸಂಚಾರ ಪೊಲೀಸರು ಕಟ್ಟುನಿಟ್ಟಿನ ದಂಡ ವಿಧಿಸಲಿದ್ದಾರೆ.

​ತಯಾರಕರು ಹಾಗೂ ಮಾರಾಟಗಾರರಿಗೂ ಕಾದಿದೆ ಕಂಟಕ

​ಕೇವಲ ಸವಾರರಷ್ಟೇ ಅಲ್ಲದೆ, ಗುಣಮಟ್ಟವಿಲ್ಲದ ಹಾಗೂ ಅಸುರಕ್ಷಿತ ಹಾಫ್ ಹೆಲ್ಮೆಟ್‌ಗಳನ್ನು ತಯಾರಿಸುವ ಸಂಸ್ಥೆಗಳು ಮತ್ತು ಇವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಅಂಗಡಿಯಾಯಕರ ಮೇಲೆಯೂ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಎಚ್ಚರಿಸಿದೆ.

​ಸಾರ್ವಜನಿಕರು ತಮ್ಮ ಜೀವ ರಕ್ಷಣೆಗಾಗಿ ನಿಗದಿತ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಬಳಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.


Share News