ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಮಹತ್ವದ ನಿರ್ಧಾರ ತಳೆದಿದ್ದು, ಇನ್ಮುಂದೆ ‘ಹಾಫ್ ಹೆಲ್ಮೆಟ್’ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.
ಅಪಘಾತಗಳ ಸಮಯದಲ್ಲಿ ಸವಾರರ ಪ್ರಾಣಕ್ಕೆ ಸುರಕ್ಷತೆ ನೀಡದ, ಕಳಪೆ ಮಟ್ಟದ ಹಾಫ್ ಹೆಲ್ಮೆಟ್ಗಳನ್ನು ಧರಿಸುವುದಕ್ಕೆ ಇಲಾಖೆ ಸಂಪೂರ್ಣ ಬ್ರೇಕ್ ಹಾಕಿದೆ.
ISI/BIS ಮಾನದಂಡ ಕಡ್ಡಾಯ: ದಂಡದ ಎಚ್ಚರಿಕೆ
ಗುಣಮಟ್ಟದ ಹೆಲ್ಮೆಟ್ ಕಡ್ಡಾಯ: ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ BIS (Bureau of Indian Standards) ಅಥವಾ ISI ಗುಣಮಟ್ಟದ ಮಾನದಂಡಗಳನ್ನು ಹೊಂದಿರುವ ಹೆಲ್ಮೆಟ್ಗಳನ್ನು ಮಾತ್ರ ಧರಿಸಬೇಕು.
ನಿಯಮ ಉಲ್ಲಂಘಿಸಿದರೆ ದಂಡ: ಸುರಕ್ಷತಾ ಮಾನದಂಡವಿಲ್ಲದ ಹಾಫ್ ಹೆಲ್ಮೆಟ್ಗಳನ್ನು ಬಳಸಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಸಾರಿಗೆ ಮತ್ತು ಸಂಚಾರ ಪೊಲೀಸರು ಕಟ್ಟುನಿಟ್ಟಿನ ದಂಡ ವಿಧಿಸಲಿದ್ದಾರೆ.
ತಯಾರಕರು ಹಾಗೂ ಮಾರಾಟಗಾರರಿಗೂ ಕಾದಿದೆ ಕಂಟಕ
ಕೇವಲ ಸವಾರರಷ್ಟೇ ಅಲ್ಲದೆ, ಗುಣಮಟ್ಟವಿಲ್ಲದ ಹಾಗೂ ಅಸುರಕ್ಷಿತ ಹಾಫ್ ಹೆಲ್ಮೆಟ್ಗಳನ್ನು ತಯಾರಿಸುವ ಸಂಸ್ಥೆಗಳು ಮತ್ತು ಇವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಅಂಗಡಿಯಾಯಕರ ಮೇಲೆಯೂ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಎಚ್ಚರಿಸಿದೆ.
ಸಾರ್ವಜನಿಕರು ತಮ್ಮ ಜೀವ ರಕ್ಷಣೆಗಾಗಿ ನಿಗದಿತ ಪ್ರಮಾಣೀಕೃತ ಹೆಲ್ಮೆಟ್ಗಳನ್ನೇ ಬಳಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.
Arakshakara Times Media
Related posts
