Share News

ಬೆಂಗಳೂರು: ತಮ್ಮ ಕರ್ತವ್ಯ ನಿಷ್ಠೆ, ದಕ್ಷತೆ ಹಾಗೂ ಜನಪರ ಕಾಳಜಿಯ ಮೂಲಕ ಸಾರ್ವಜನಿಕ ವಲಯದಲ್ಲಿ “ಜನಪ್ರಿಯ ಅಧಿಕಾರಿ” ಎಂದೇ ಗುರುತಿಸಿಕೊಂಡಿರುವ ಸಹಾಯಕ ಪೊಲೀಸ್ ಕಮಿಷನರ್ (ACP) ಎಲ್.ವೈ. ರಾಜೇಶ್ (L Y Rajesh) ಅವರಿಗೆ ಸರ್ಕಾರದ ಪ್ರತಿಷ್ಠಿತ ‘ಕಮಾಂಡೇಷನ್ ಡಿಸ್ಕ್’ (Commendation Disc) ಪ್ರಶಸ್ತಿ ಲಭಿಸಿದೆ. ಪೊಲೀಸ್ ಇಲಾಖೆಯಲ್ಲಿನ ಅವರ ಸುದೀರ್ಘ ಹಾಗೂ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಗೌರವವನ್ನು ನೀಡಿದ್ದು, ಸಾರ್ವಜನಿಕ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರಿ ಸಂತಸ ವ್ಯಕ್ತವಾಗಿದೆ.

ಎಸಿಪಿ ಎಲ್.ವೈ. ರಾಜೇಶ್ ಅವರು ಇಲಾಖೆಯಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಉನ್ನತ ಹುದ್ದೆಯಲ್ಲಿದ್ದರೂ, ಸಮಾಜದ ತಳಮಟ್ಟದ ಜನರ ಬಗ್ಗೆ ಅವರಿಗಿರುವ ಕಾಳಜಿ ಅಪಾರವಾದದ್ದು. ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೆ, ಸಮಾಜಮುಖಿ ಚಿಂತನೆಗಳ ಮೂಲಕ ಸದಾ ಜನರ ಮಧ್ಯೆ ಇರುವ ಅಧಿಕಾರಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.

ಅಧಿಕಾರಿ ಎಲ್.ವೈ. ರಾಜೇಶ್ ಅವರ ಸಾಮಾಜಿಕ ಸೇವೆ ಮತ್ತು ಮಾನವೀಯ ಗುಣಗಳನ್ನು ಸಾರ್ವಜನಿಕರು ಕಣ್ಣಾರೆ ಕಂಡು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವೈಯಕ್ತಿಕವಾಗಿ ಆಸರೆ ನೀಡುವುದು ಹಾಗೂ ಸಮಾಜದ ನಿರಾಶ್ರಿತ ಬಡ ಜನರಿಗೆ ಸಕಾಲದಲ್ಲಿ ನೆರವಾಗುವ ಮೂಲಕ ಅವರು ಸಾವಿರಾರು ಜನರ ಬದುಕಿಗೆ ಬೆಳಕಾಗಿದ್ದಾರೆ. ಅಧಿಕಾರದ ದರ್ಪ ತೋರಿಸದೆ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಅವರ ಈ ಗುಣವೇ ಅವರನ್ನು ಇಲಾಖೆಯಲ್ಲಿ ವಿಶಿಷ್ಟ ಅಧಿಕಾರಿಯನ್ನಾಗಿ ಮಾಡಿದೆ.

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗೆ ಸೂಕ್ತ ಗೌರವ ಲಭಿಸಿರುವುದಕ್ಕೆ ಸಾರ್ವಜನಿಕರು ಹಾಗೂ ಅವರ ಅಭಿಮಾನಿಗಳು ಕರ್ನಾಟಕ ಸರ್ಕಾರಕ್ಕೆ ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್.ವೈ. ರಾಜೇಶ್ ಸರ್ ಅವರಂತಹ ಸಮಾಜದ ಬಗ್ಗೆ ಕಳಕಳಿಯುಳ್ಳ, ಮಾನವೀಯತೆ ಇರುವ ದಕ್ಷ ಅಧಿಕಾರಿಗಳು ಸದಾ ಜನರ ಮಧ್ಯೆ ಇದ್ದು ಸೇವೆ ಸಲ್ಲಿಸುವಂತಾಗಲಿ ಮತ್ತು ಇವರ ಸೇವೆ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಪ್ರೇರಣೆಯಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.

ವಿಶೇಷ ವರದಿ :- ಆಂಟೋನಿ ಪತ್ರಕರ್ತ ಆರಕ್ಷಕರ ಟೈಮ್ಸ್ ಮೀಡಿಯಾ ಪ್ರಧಾನ ಸಂಪಾದಕರು 

 


Share News