Share News

​ಆನೇಕಲ್: ಹುಲ್ಲಹಳ್ಳಿ ಹಾಗೂ ಬೇಗೂರು-ಕೊಪ್ಪ ರಸ್ತೆಯಲ್ಲಿರುವ ಕ್ರೈಸ್ಟ್ ಅಕಾಡೆಮಿಯ ಆಫೀಸ್ ಇಂಚಾರ್ಜ್ ಜೋಸೆಫ್. ಪಿ.ವಿ (28) ಅವರು ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

​ಘಟನೆಯು ಕೊಪ್ಪ ಗೇಟ್ ಸಮೀಪದ ಕೆಂಪಾಪುರ ಪೆಟ್ರೋಲ್ ಬಂಕ್ ಬಳಿ ರಾತ್ರಿ ಸುಮಾರು 11:30 ರ ವೇಳೆಗೆ ಸಂಭವಿಸಿದೆ. ಜೋಸೆಫ್ ಅವರು ಹೆಲ್ಮೆಟ್ ಧರಿಸಿದ್ದಾಗ್ಯೂ, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ವ್ಯಕ್ತಿ ವಿವರ:

ಮೃತ ಜೋಸೆಫ್ ಅವರು ಮೂಲತಃ ಮಂಗಳೂರು ಮೂಲದ ಪುತ್ತೂರು ತಾಲೂಕಿನ ನಿವಾಸಿಯಾಗಿದ್ದು, ವರ್ಗಿಸ್ ಹಾಗೂ ಶ್ಯಾನಿ ದಂಪತಿಯ ಪುತ್ರ. ಬೆಂಗಳೂರಿಗೆ ಬಂದು ಒಂದೂವರೆ ವರ್ಷವಾಗಿದ್ದ ಇವರು ಆನೇಕಲ್ ತಾಲೂಕಿನ ಸೂಪಹಳ್ಳಿಯಲ್ಲಿ ನೆಲೆಸಿದ್ದು, ಕ್ರೈಸ್ಟ್ ಅಕಾಡೆಮಿಯಲ್ಲಿ ಆಫೀಸ್ ಇಂಚಾರ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು.

​ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೂರ್ಣಪ್ರಮಾಣದ ತನಿಖೆಯ ಬಳಿಕ ಅಪಘಾತಕ್ಕೆ ನಿಖರ ಕಾರಣ ಬೆಳಕಿಗೆ ಬರಬೇಕಿದೆ.

ವರದಿ :- ಪ್ರದೀಪ್ ರಾಜ್ ಕ್ರೈಂ ರಿಪೋರ್ಟರ್ 


Share News