ಕೆಜಿಎಫ್: ಕಾಮಸಮುದ್ರಂ ಠಾಣೆ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಒಟ್ಟು ₹7,73,000 ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು:
ಆರೋಪಿ 1: ಪದನೇನಿ ತಿರುಪತಿ ಸ್ವಾಮಿ @ ವಂಶಿ (34 ವರ್ಷ)
ಆರೋಪಿ 2: ಲಕ್ಷ್ಮೀಪತಿ (36 ವರ್ಷ)
(ಇಬ್ಬರೂ ಆಂಧ್ರಪ್ರದೇಶ ರಾಜ್ಯದ ಬಂಗಾರುಪಾಳ್ಯಂ ಮಂಡಲದ ನಿವಾಸಿಗಳು).
ಜಪ್ತಿ ಮಾಡಿದ ಮಾಲುಗಳ ವಿವರ:
ಚಿನ್ನ-ಬೆಳ್ಳಿ ಹಾಗೂ ವಾಹನ: ಸುಮಾರು ₹4,70,000 ಮೌಲ್ಯದ 30 ಗ್ರಾಂ ಚಿನ್ನದ ಆಭರಣಗಳು, 265 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ Yamaha R1 ದ್ವಿಚಕ್ರ ವಾಹನ.
ನಗದು ಹಣ: ಈ ಹಿಂದೆ ಕಾಮಸಮುದ್ರಂ ಠಾಣೆಯ ಕ್ರೈಂ ನಂ. 39/2026 ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಉಪೇಂದ್ರ ರಾವ್ ನೀಡಿದ ಮಾಹಿತಿಯಂತೆ ₹2,63,000 ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ (ಪ್ರಕರಣ 169/2026, 184/2026) ಹಾಗೂ ಆಂಡ್ರಸನ್‌ಪೇಟೆ (ಪ್ರಕರಣ 62/2026) ಠಾಣೆಗಳಲ್ಲಿ ದಾಖಲಾಗಿದ್ದ ಸರಣಿ ಕಳ್ಳತನ ಪ್ರಕರಣಗಳ ಬೆನ್ನತ್ತಿದ್ದ ಪಿಎಸ್‌ಐ ಬಿ.ವಿ. ಕಿರಣ್ ಕುಮಾರ್ ನೇತೃತ್ವದ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಡಿವೈಎಸ್‌ಪಿ ಲಕ್ಷ್ಮಯ್ಯ ವಿ. ಹಾಗೂ ಬಂಗಾರಪೇಟೆ ಇನ್ಸ್‌ಪೆಕ್ಟರ್ ರವಿಕುಮಾರ್ ಸಿ. ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಕಾಮಸಮುದ್ರಂ ಪಿಎಸ್‌ಐ ಹಾಗೂ ಸಿಬ್ಬಂದಿಗಳ ತಂಡಕ್ಕೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಿವಾಂತು ರಜಪೂತ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
