Share News

ಬೀದರ್: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ೮ನೇ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ (State Level Police Duty Meet) ಬೀದರ್ ಜಿಲ್ಲೆಯ ಹುಮನಾಬಾದ್ ವೃತ್ತದ ಸಿ.ಪಿ.ಐ. ಶ್ರೀ ಸಂತೋಷ ತಟ್ಟೆಪಳ್ಳಿ ಅವರು ‘ಕ್ರೈಂ ಸೀನ್ ಫೋಟೋಗ್ರಾಫಿ’ (Crime Scene Photography) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

​ಅತ್ಯುತ್ತಮ ಪ್ರದರ್ಶನ:

ಈಶಾನ್ಯ ವಲಯದ ಕಲಬುರಗಿ ವಿಭಾಗವನ್ನು ಪ್ರತಿನಿಧಿಸಿ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ್ದ ಶ್ರೀ ಸಂತೋಷ ತಟ್ಟೆಪಳ್ಳಿ ಅವರು, ಅಪರಾಧ ಸ್ಥಳದ ಛಾಯಾಗ್ರಹಣ (Crime Scene Photography) ವಿಭಾಗದಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯ ಮೆರೆದು ಈ ಸಾಧನೆ ಮಾಡಿದ್ದಾರೆ. ಅವರ ಈ ಹೆಮ್ಮೆಯ ಸಾಧನೆಯು ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದೆ.

​ಪೊಲೀಸ್ ವರಿಷ್ಠಾಧಿಕಾರಿಗಳಿಂದ ಅಭಿನಂದನೆ:

ರಾಜ್ಯ ಮಟ್ಟದಲ್ಲಿ ಸಾಧನೆಗೈದ ಸಿ.ಪಿ.ಐ. ಶ್ರೀ ಸಂತೋಷ ತಟ್ಟೆಪಳ್ಳಿ ಅವರನ್ನು ಈಶಾನ್ಯ ವಲಯ ಕಲಬುರಗಿಯ ಮಾನ್ಯ ಡಿ.ಐ.ಜಿ.ಪಿ. ಶ್ರೀ ಶಾಂತನು ಸಿನ್ಹಾ, ಐ.ಪಿ.ಎಸ್. ಅವರು ಮುಕ್ತಕಂಠದಿಂದ ಪ್ರಶಂಸಿದ್ದಾರೆ.

​ಅಲ್ಲದೆ, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ (SP) ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಅವರು ಹಾಗೂ ಸಮಸ್ತ ಜಿಲ್ಲಾ ಪೊಲೀಸ್ ಸಿಬ್ಬಂದಿಯ ವರ್ಗದವರು ಶ್ರೀ ಸಂತೋಷ ತಟ್ಟೆಪಳ್ಳಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 


Share News