ಬಿಸಿಲ ಬೇಗೆಯಲ್ಲಿ ಬೆವರುತ್ತಿರುವ ಸಂಚಾರಿ ಪೊಲೀಸರಿಗೆ ಗುಡ್ ನ್ಯೂಸ್: ಮೂಲಭೂತ ಸೌಕರ್ಯ ಒದಗಿಸಲು ಡಿಜಿಪಿ ಆದೇಶ!
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಚಾರ ವಿಭಾಗದ ಸಿಬ್ಬಂದಿಗಳಿಗೆ ತಕ್ಷಣವೇ ನೆರಳಿನ ವ್ಯವಸ್ಥೆ, ಮಾಸ್ಕ್ ಮತ್ತು ಕುಡಿಯುವ ನೀರು ಸೇರಿದಂತೆ...
ಕುಣಿಗಲ್ ಪೊಲೀಸ್ ಇನ್ಸ್ಪೆಕ್ಟರ್ ಎಂ. ನಾಯಕ್ ಅವರ ಜನಪರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಕುಣಿಗಲ್: ಪೊಲೀಸ್ ಇಲಾಖೆ ಎಂದರೆ ಸಾಕು ಸಾಮಾನ್ಯ ಜನರಲ್ಲಿ ಒಂದು ರೀತಿಯ ಆತಂಕ ಅಥವಾ ಭಯ ಇರುವುದು ಸಹಜ. ಇಂದಿನ ದಿನಗಳಲ್ಲಿ ಖಾಕಿ ಸಮವಸ್ತ್ರದ ಅಹಂಕಾರ ಮತ್ತು ದರ್ಪದ ನಡುವೆ ಮಾನವೀಯತೆ ಮರೆಯಾಗುತ್ತಿದೆ ಎಂಬ ಸಾರ್ವಜನಿಕ ವಲಯದ ಮಾತಿಗೆ ಕುಣಿಗಲ್ ಇನ್ಸ್ಪೆಕ್ಟರ್...
ದಕ್ಷ ಐಪಿಎಸ್ ಅಧಿಕಾರಿ ಶುಭಾನ್ವಿತಾ ಅವರಿಗೆ ಜನ್ಮದಿನದ ಸಂಭ್ರಮ: ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶುಭಾಶಯಗಳ ಮಹಾಪೂರ
ತಮ್ಮ ದಿಟ್ಟ ನಿರ್ಧಾರಗಳು ಹಾಗೂ ದಕ್ಷ ಆಡಳಿತದ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), 2018ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶುಭಾನ್ವಿತಾ ಅವರು ಇಂದು (ಏಪ್ರಿಲ್ 25) 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ...
ತುಮಕೂರಿನಲ್ಲಿ ನವಿಲುಗಳ ಮಾರಣಹೋಮ: ಒಂದೇ ವಾರದಲ್ಲಿ 32 ಸಾವು, ಬೆಚ್ಚಿಬಿದ್ದ ಪರಿಸರ ಪ್ರೇಮಿಗಳು!
ತುಮಕೂರು: ಜಿಲ್ಲೆಯ ಊರ್ಡಿಗೆರೆ ಹಾಗೂ ಗೂಳೂರು ಹೋಬಳಿ ವ್ಯಾಪ್ತಿಯಲ್ಲಿ ನವಿಲುಗಳ ಸಾವಿನ ಸರಣಿ ಮುಂದುವರಿದಿದ್ದು, ಕಳೆದ ಕೇವಲ ಒಂದು ವಾರದಲ್ಲಿ ಬರೋಬ್ಬರಿ 32 ನವಿಲುಗಳು ಸಾವನ್ನಪ್ಪಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ರಾಷ್ಟ್ರಪಕ್ಷಿಗಳ ಈ ದಿಢೀರ್ ಸಾವು ವನ್ಯಜೀವಿ ಪ್ರಿಯರು ಹಾಗೂ ಅರಣ್ಯ...
ಎತ್ತ ಸಾಗುತ್ತಿದೆ ಸ್ವಚ್ಛ ಭಾರತ್ ಅಭಿಯಾನ? ಹಿರಿಯೂರಿನ ‘ಡಾಗ್ ಸರ್ಕಲ್’ ನಾಗರಿಕರ ಆಕ್ರೋಶ
ಹಿರಿಯೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಅನುಷ್ಠಾನದ ವೈಫಲ್ಯ ಎದ್ದು ಕಾಣುತ್ತಿದೆ. ಹಿರಿಯೂರು ಟೌನ್‌ನ ವೇದಾವತಿ ನಗರದ 3ನೇ ವಾರ್ಡ್‌ನಲ್ಲಿರುವ ‘ಡಾಗ್ ಸರ್ಕಲ್’ ಭಾಗದಲ್ಲಿನ ಅವ್ಯವಸ್ಥೆಯೇ ಇದಕ್ಕೆ ಸಾಕ್ಷಿ...
ದೇವಸ್ಥಾನದ ಕಳ್ಳತನ ಪ್ರಕರಣ ಭೇದಿಸಿದ ಯಲ್ಲಾಪುರ ಪೊಲೀಸರು: ಆರೋಪಿಯ ಬಂಧನ, ಲಕ್ಷಾಂತರ ಮೌಲ್ಯದ ಸ್ವತ್ತು ಜಪ್ತಿ!
ಯಲ್ಲಾಪುರ: ಇಲ್ಲಿನ ಅರಬೈಲ್ ಗ್ರಾಮದ ಶಿರಡಿಕೆರೆ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ ಕೇವಲ ನಾಲ್ಕು ದಿನಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ವಾಹನ ಸೇರಿದಂತೆ ಒಟ್ಟು 1.19 ಲಕ್ಷ...
ತುಮಕೂರು: ಸುಗಮ ಸಂಚಾರಕ್ಕೆ ಟ್ರಾಫಿಕ್ ವಾರ್ಡನ್‌ಗಳ ನಿಯೋಜನೆ; ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ
ತುಮಕೂರು: ನಗರದ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ‘ಟ್ರಾಫಿಕ್ ವಾರ್ಡನ್’ಗಳನ್ನು ನಿಯೋಜಿಸುವ ಕುರಿತು ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ಮಹತ್ವದ ಪೂರ್ವಭಾವಿ ಸಭೆ ನಡೆಸಲಾಯಿತು. ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ...
ಬೆಂಕಿಯ ಕೆನ್ನಾಲಿಗೆಗೆ ಅಡಿಕೆ ತೋಟ ಭಸ್ಮ: ರೈತನ ದಶಕಗಳ ಶ್ರಮ ಕಣ್ಣೆದುರೇ ಸುಟ್ಟು ಕರಕಲು!
ಸಿದ್ದಾಪುರ: ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ರೈತರೊಬ್ಬರ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ. ಹತ್ತಾರು ವರ್ಷಗಳ ಕಾಲ ಮಗುವಿನಂತೆ ಸಲಹಿದ್ದ ಅಡಿಕೆ ಮರಗಳು...
ಸಂತ ಫ್ರಾನ್ಸಿಸ್ ಜೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಇಡೀ ಕ್ರೈಸ್ತ ಸಮುದಾಯಕ್ಕೆ ನೋವು ತಂದಿದೆ – ಸ್ಟ್ಯಾನಿ ಪಿಂಟೋ ಆಕ್ರೋಶ
ಬೆಂಗಳೂರು: ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌತಮ್ ಕಟ್ಟರ್ ಎಂಬುವವರು ಸಂತ ಫ್ರಾನ್ಸಿಸ್ ಜೇವಿಯರ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯು ಸಮಸ್ತ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ತೀವ್ರ ಅಸಮಾಧಾನ...
ಕೆ.ಆರ್.ನಗರ: ಒಂಟಿ ಮಹಿಳೆಯರೇ ಈ ಖದೀಮರ ಟಾರ್ಗೆಟ್; ಮೂವರು ಕತರ್ನಾಕ್ ಸರಗಳ್ಳರ ಬಂಧನ, ₹21 ಲಕ್ಷ ಮೌಲ್ಯದ ಚಿನ್ನ ವಶ!
ಕೆ.ಆರ್.ನಗರ: ತಾಲ್ಲೂಕಿನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಹಾಗೂ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಮೂವರು ಅಂತರ ಜಿಲ್ಲಾ ಸರಗಳ್ಳರನ್ನು ಕೆ.ಆರ್.ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು: ಮಂಡ್ಯ ಜಿಲ್ಲೆಯ...