ಬೆಂಗಳೂರಲ್ಲಿ ಭೀಕರ ಘಟನೆ: 7ನೇ ಮಹಡಿಯಿಂದ ಬಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಸಾವು, ಯುವಕನಿಗೆ ಗಂಭೀರ ಗಾಯ
ಬೆಂಗಳೂರು ನಗರದ ವೈಟ್‌ಫೀಲ್ಡ್ ಭಾಗದ ಖಾಸಗಿ ಕೋ-ಲಿವಿಂಗ್ ಪಿಜಿಯ 7ನೇ ಮಹಡಿಯಿಂದ ಕೆಳಗೆ ಬಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಮೃತಪಟ್ಟು, ಯುವಕ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಪಾಂಡಿಚೇರಿ ಮೂಲದ ಜನನಿ (ಸಾಫ್ಟ್‌ವೇರ್ ಎಂಜಿನಿಯರ್) ಮೃತಪಟ್ಟ ದುರದೃಷ್ಟಕರ ಯುವತಿಯಾಗಿದ್ದು,...
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದ ಸಿಇಎನ್ ಇನ್‌ಸ್ಪೆಕ್ಟರ್ ರವಿ ಕೆ.ಬಿ.: ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ!
ಮೈಸೂರು: ಮಧ್ಯಪ್ರದೇಶದಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ವಿಧಿವಶರಾದ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರವಿ ಕೆ.ಬಿ. ಅವರ ಪಾರ್ಥಿವ ಶರೀರಕ್ಕೆ ಇಂದು ಅವರ ಸ್ವಗ್ರಾಮದಲ್ಲಿ ಮೈಸೂರು ಜಿಲ್ಲಾ...
ಬೊಮ್ಮನಹಳ್ಳಿಯಲ್ಲಿ ಮಧ್ಯರಾತ್ರಿ ಸಿನೆಮಾ ಮಾದರಿ ಫೈರಿಂಗ್ – ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಯ ಕಾಲಿಗೆ ಬಿತ್ತು ಗುಂಡು
ಬೆಂಗಳೂರು: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಆರೋಪಿಯೊಬ್ಬ ಪೊಲೀಸರ ಮೇಲೆಯೇ ಆಯುಧದಿಂದ ಭೀಕರ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯದಲ್ಲಿ ಮಧ್ಯರಾತ್ರಿ ನಡೆದಿದೆ. ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ...
ನಿಯಮ ಉಲ್ಲಂಘಿಸಿ ಸಾಗಿಸುತ್ತಿದ್ದ 1,033 ಕೆ.ಜಿ. ಕೋಳಿ ಮಾಂಸ ಸೀಜ್
ರಾಣೇಬೆನ್ನೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಮಗಳನ್ನು ಗಾಳಿಗೆ ತೂರಿ ಸೂಕ್ತ ರೀತಿಯಲ್ಲಿ ಪ್ಯಾಕಿಂಗ್ ಮಾಡದೇ ಸಾಗಿಸಲಾಗುತ್ತಿದ್ದ ಒಟ್ಟು 1,033 ಕೆ.ಜಿ. ಕೋಳಿ ಮಾಂಸವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಬೆಂಗಳೂರು ಇಲಾಖೆಯ...
ನೇರಳೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ 4 ಚಿರತೆ ಮರಿಗಳು ಪ್ರತ್ಯಕ್ಷ – ಸ್ಥಳೀಯರಲ್ಲಿ ಆತಂಕ
ಚನ್ನಪಟ್ಟಣ: ತಾಲೂಕಿನ ನೇರಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ರೈತ ನಾಗೇಶ್ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಸುಮಾರು 4 ರಿಂದ 5 ದಿನಗಳ ಪ್ರಾಯದ 4...
ಸಾರ್ವಜನಿಕರ ಗೌರವ ಕಾಪಾಡಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಆಗ್ರಹ
ಬೆಂಗಳೂರು: ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ಶಾಂತಿ ಸಭೆ, ಎಸ್‌ಸಿ-ಎಸ್‌ಟಿ ಜನರ ಕುಂದುಕೊರತೆ ಹಾಗೂ ಮಾಸಿಕ ಜನಸಂಪರ್ಕ ಸಭೆಗಳಲ್ಲಿ ಭಾಗವಹಿಸುವ ಸಾರ್ವಜನಿಕರನ್ನು ನೆಲದ ಮೇಲೆ ಕೂರಿಸಿ ಅಧಿಕಾರಿಗಳು ಕುರ್ಚಿಯಲ್ಲಿ ಕುಳಿತುಕೊಳ್ಳುವ ಅಸಮಾನತೆಯ ಪದ್ಧತಿಯನ್ನು ತಕ್ಷಣವೇ ತಡೆಯುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ...
ಮಂಡ್ಯ ಮಿಮ್ಸ್‌ನಲ್ಲಿ ಜೈಲು ಕೈದಿ ಪತ್ತೆ ಪ್ರಕರಣ: ಡಿಜಿ ಅಲೋಕ್ ಕುಮಾರ್ ತನಿಖೆಗೆ ಆದೇಶ
ಮಂಡ್ಯ: ನ್ಯಾಯಾಲಯದ ಅನುಮತಿಯಿಲ್ಲದೆ ಮಂಡ್ಯ ಕಾರಾಗೃಹದ ಕೈದಿಯೊಬ್ಬ ಮಿಮ್ಸ್ (MIMS) ಆಸ್ಪತ್ರೆಯ ವಾರ್ಡ್‌ನಲ್ಲಿ ದಾಖಲಾಗಿ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿ ಅಲೋಕ್ ಕುಮಾರ್, ತನಿಖೆಗೆ ಆದೇಶಿಸಿದ್ದಾರೆ. ಕಾರಾಗೃಹ ದಕ್ಷಿಣ ವಲಯದ ಡಿಐಜಿ ದಿವ್ಯಾಶ್ರೀ ಅವರ...
ಬಲೂನ್ ನುಂಗಿದ 6 ವರ್ಷದ ಬಾಲಕ ಶ್ವಾಸಕೋಶ ಕಟ್ಟಿ ಸಾವು!
ವಾಣಿಯಂಬಾಡಿ / ತಿರುಪತ್ತೂರು: ಬಲೂನ್ ನುಂಗಿದ ಪರಿಣಾಮ ಶ್ವಾಸಕೋಶ ಕಟ್ಟಿ (ಉಸಿರುಗಟ್ಟಿ) 6 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನಾಟ್ರಂಪಳ್ಳಿ ಬಳಿಯ ಪಚ್ಚೂರಿನಲ್ಲಿ ನಡೆದಿದೆ. ಪಚ್ಚೂರು ನಿವಾಸಿಗಳಾದ ಕುಮಾರ್ ಮತ್ತು ಸತ್ಯ ದಂಪತಿಯ 6 ವರ್ಷದ ಮಗ ಸೋಮನಾಥ್ ಮೃತ...
ಸಹಪಾಠಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ: ಡೆತ್‌ನೋಟ್ ಬರೆದಿಟ್ಟು ಅಗ್ರ ಕೆರೆಗೆ ಹಾರಿದ ವಾಣಿ
ಬೆಂಗಳೂರು: ಕಾಲೇಜು ದಿನಗಳ ಸಹಪಾಠಿಯೊಬ್ಬ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು 22 ವರ್ಷದ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿ...
ಮಡಿವಾಳದ ಸುಹೇಲ್ ಕೊಲೆ ಕೇಸ್: 24 ಗಂಟೆಯೊಳಗೆ ರೌಡಿಶೀಟರ್ ಆದಿಲ್ ಸೇರಿ 6 ಮಂದಿ ಬಂಧನ
ಬೆಂಗಳೂರು: ಮಡಿವಾಳದಲ್ಲಿ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ 24 ಗಂಟೆಯೊಳಗೆ ರೌಡಿಶೀಟರ್ ಆದಿಲ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ ಮಡಿವಾಳ...