ಬೆಳಗಾವಿ: ಉತ್ತರ ವಲಯ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 43 ಸಿವಿಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಪೊಲೀಸ್ ಮಹಾನಿರೀಕ್ಷಕರಾದ (IGP) ಜಿ. ಸಂಗ್ರಾಮ್ ಸಿಂಗ್ ಪಾಟೀಲ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 21 ರಂದು ಜರುಗಿದ ಬೆಳಗಾವಿ ವಲಯ ಮಟ್ಟದ ಪೊಲೀಸ್ ಸಿಬ್ಬಂದಿ ಮಂಡಳಿ (Police Establishment Board) ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನದಂತೆ ಸ್ವಂತ ಕೋರಿಕೆ ಮೇರೆಗೆ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ನೂತನ ಠಾಣೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ತಕ್ಷಣವೇ ಕರ್ತವ್ಯಕ್ಕೆ ವರದಿ ಮಾಡಲು ಸೂಚನೆ:
ವರ್ಗಾವಣೆಗೊಂಡ ಅಧಿಕಾರಿಗಳನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ತಕ್ಷಣವೇ ಬಿಡುಗಡೆಗೊಳಿಸಿ, ನಿಯೋಜಿತ ಹೊಸ ಠಾಣೆಗಳಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ನಿರ್ದೇಶ ನೀಡಲಾಗಿದೆ. ಬಿಡುಗಡೆ ಹಾಗೂ ಹೊಸ ಸ್ಥಳಗಳಲ್ಲಿ ಅಧಿಕಾರ ಸ್ವೀಕರಿಸಿದ ಕುರಿತು ವರದಿಯನ್ನು ವಲಯ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಪ್ರಮುಖ ವರ್ಗಾವಣೆಗೊಂಡ ಅಧಿಕಾರಿಗಳು:
ಗಂಗಪ್ಪ ಎಂ. ಪೂಜೇರಿ: ಜಮಖಂಡಿ ನಗರ ಠಾಣೆಯಿಂದ ನಿಪ್ಪಾಣಿ ನಗರ ಠಾಣೆಗೆ
ಡಬ್ಬು. ಹೆಚ್. ಯಾದವಾದ: ಮುರಗೋಡ ಠಾಣೆಯಿಂದ ಬೈಲಹೊಂಗಲ ಠಾಣೆಗೆ
ಲಕ್ಷ್ಮಣಪ್ಪ ಆರಿ: ಬೆಟಗೇರಿ ಠಾಣೆಯಿಂದ ಅಂಕಲಿ ಠಾಣೆಗೆ
ಸುರೇಶ ಮಂಟುರ: ಕಲಕೇರಿ ಠಾಣೆಯಿಂದ ಕುಡಚಿ ಠಾಣೆಗೆ
ಬಸನಗೌಡ ನೇರ್ಲಿ: ಚಿಕ್ಕೋಡಿ ಠಾಣೆಯಿಂದ ಸದಲಗಾ ಠಾಣೆಗೆ
ಅಜೀತ ಹೊಸಮನಿ: ಮುಧೋಳ ಠಾಣೆಯಿಂದ ತಿಕೋಟಾ ಠಾಣೆಗೆ
ದೇವರಾಜ ಉಳಗಡ್ಡಿ: ತಿಕೋಟಾ ಠಾಣೆಯಿಂದ ಗೋಲಗುಂಬಜ ಠಾಣೆಗೆ
ಶ್ರೀಮತಿ ಸುಜ್ಞಾ ನಂದಿಗೋಣ: ಗಾಂಧಿಚೌಕ್ ಠಾಣೆಯಿಂದ ಆದರ್ಶ ನಗರ ಠಾಣೆಗೆ
ನಿಜೀಲ ಕಾಂಬಳೆ: ಗೋಕಾಕ ನಗರ ಠಾಣೆಯಿಂದ ಲೋಕಾಪೂರ ಠಾಣೆಗೆ
ಮಹೇಶ ಸಂಖ: ಇಂಡಿ ನಗರ ಠಾಣೆಯಿಂದ ಜಲನಗರ ಠಾಣೆಗೆ
ಉಳಿದಂತೆ ಹಲವು ಅಧಿಕಾರಿಗಳನ್ನು ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ವಿವಿಧ ಠಾಣೆಗಳಿಗೆ ಹಾಗೂ ಜಾಗೃತ ದಳಗಳಿಗೆ ನಿಯೋಜಿಸಲಾಗಿದೆ. ಸೂಕ್ತ ಸ್ಥಳ ನಿಯುಕ್ತಿಗೊಳ್ಳದ ಇತರ ಪಿಎಸ್‌ಐಗಳು ವಲಯ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.