Share News

ಬೆಂಗಳೂರಿನ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬನ್ನೇರುಘಟ್ಟ ರಸ್ತೆಯ ಅಪಾರ್ಟ್‌ಮೆಂಟ್‌ ಒಂದರ ಮೇಲೆ ದಾಳಿ ನಡೆಸಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ರೌಡಿ ಶೀಟರ್‌ನನ್ನು ಬಂಧಿಸಿದ್ದಾರೆ. ಈತನ ಬಳಿ ಪರವಾನಿಗೆ ಇಲ್ಲದ 2 ಪಿಸ್ತೂಲ್‌ಗಳು ಮತ್ತು 3 ಜೀವಂತ ಗುಂಡುಗಳು ಪತ್ತೆಯಾಗಿವೆ. ತನಿಖೆಯ ವೇಳೆ, ಈ ಮಾರಕ ಆಯುಧಗಳನ್ನು ಹೊರರಾಜ್ಯದ ಉದಯಗಿರಿ ಪೊಲೀಸ್ ಠಾಣೆಯ ರೌಡಿ ಶೀಟರ್‌ನಿಂದ ಖರೀದಿಸಿರುವುದಾಗಿ ತಿಳಿದುಬಂದಿದ್ದು, ಆತನನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 4 ವಾರೆಂಟ್‌ಗಳಿದ್ದು, ಕಳೆದ 7 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಉದಯಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇನ್ನೊಬ್ಬನ ವಿರುದ್ಧ ಮೈಸೂರಿನಲ್ಲಿ 7 ವಾರೆಂಟ್‌ಗಳಿದ್ದು, ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ತಪ್ಪಿಸಿಕೊಳ್ಳುತ್ತಿದ್ದನು.

ಈ ಯಶಸ್ವಿ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರಾದ ಶ್ರೀ. ಅಜಯ್ ಹಿಲೋರಿ ಮತ್ತು ಡಿಸಿಪಿ ಶ್ರೀ. ಹರಿಬಾಬು ಬಿ ಎಲ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಶ್ರೀ. ಸಿ ಎಸ್ ಆನಂದ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಶ್ರೀ. ಆರ್ ರಮೇಶ್ ಮತ್ತು ಶ್ರೀ. ಸುರೇಶ್ ಪಿ ಅವರ ತಂಡ ನಿರ್ವಹಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News