Share News

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 133 ಮೊಬೈಲ್ ಫೋನ್‌ಗಳು, 3 ಲ್ಯಾಪ್‌ಟಾಪ್‌ಗಳು ಮತ್ತು 1 ಟ್ಯಾಬ್ ಅನ್ನು ವಶಪಡಿಸಿಕೊಳ್ಳಲಾಗಿದೆ.

1. ಉತ್ತರ ವಿಭಾಗ :-

ಸಿ.ಇ.ಐ.ಆರ್ (CEIR) ಪೋರ್ಟಲ್ ಬಳಸಿಕೊಂಡು ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಅಥವಾ ಕಳುವಾಗಿದ್ದ 22.3 ಲಕ್ಷ ರೂ. ಮೌಲ್ಯದ 110 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ.

2. ಮೈಕೋಲೇಔಟ್ :-

ಮನೆಯೊಂದಕ್ಕೆ ಕಿಟಕಿಯ ಮೂಲಕ ನುಗ್ಗಿ ಕಳವು ಮಾಡಿದ್ದ ಇಬ್ಬರು ಹೊರರಾಜ್ಯದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 23 ಮೊಬೈಲ್, 3 ಲ್ಯಾಪ್‌ಟಾಪ್ ಮತ್ತು 1 ಟ್ಯಾಬ್ ವಶಪಡಿಸಿಕೊಳ್ಳಲಾಗಿದೆ.

ಜಪ್ತಿ ಮಾಡಲಾದ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 28.09 ಲಕ್ಷ ರೂಪಾಯಿಗಳಾಗಿವೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಲ್ಲಿ ಕೂಡಲೇ ಸಿ.ಇ.ಐ.ಆರ್ (CEIR) ಪೋರ್ಟಲ್‌ನಲ್ಲಿ ದಾಖಲಿಸಲು ಅಥವಾ ಪೊಲೀಸ್ ಠಾಣೆಗೆ ದೂರು ನೀಡಲು ಪೋಲಿಸ್ ಇಲಾಖೆ ತಿಳಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News