Share News

*ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಂದ ಕಳವು ವಸ್ತು, ಚಿಕ್ಕ ಹುಡುಗನಿಂದ ದುಷ್ಟ ಕೃತ್ಯಕ್ಕೆ ಕುಮ್ಮಕ್ಕು, ಮಾಲು ಮಾರಾಟ ಮಾಡುವಾಗ ಆರಕ್ಷಕರ ಬಲೆಗೆ*

ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಎನ್ ಬಡಾವಣೆಯಲ್ಲಿ 2024ರ ಅಕ್ಟೋಬರ್‌ನಿಂದ 2025ರ ಆಗಸ್ಟ್ ನಡುವೆ ನಡೆದಿದ್ದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ಪಡೆದು, ಮಲ್ಲೇಶ್ವರಂ, ಮತ್ತಿಕೆರೆ ಮತ್ತು ಮಾಗಡಿ ರಸ್ತೆಯ ವಿವಿಧ ಆಭರಣ ಮಳಿಗೆಗಳಿಗೆ ಮಾರಾಟ ಮಾಡಿ ಅಕ್ರಮ ಲಾಭ ಗಳಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ ಒಟ್ಟು 107 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ 14.59 ಲಕ್ಷ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯು ಉತ್ತರ ವಿಭಾಗದ ಡಿಸಿಪಿ ಶ್ರೀ. ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಮತ್ತು ಎಸಿಪಿ ಶ್ರೀಮತಿ. ಮೇರಿ ಶೈಲಜಾ ಅವರ ನೇತೃತ್ವದಲ್ಲಿ ನಡೆದಿದೆ. ಯಶವಂತಪುರ ಇನ್ಸ್ಪೆಕ್ಟರ್ ಶ್ರೀ. ಮಂಜುನಾಥ್ ಎಸ್ ಅವರ ತಂಡದ ನಿರಂತರ ಪ್ರಯತ್ನ ಇಲ್ಲಿ ನೋಡಬಹುದು.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News