Share News

ಬೆಂಗಳೂರು ಪೂರ್ವ ವಿಭಾಗದ ಪೊಲೀಸರ ಮಹತ್ವದ ಕಾರ್ಯಾಚರಣೆ, ಸಿ.ಇ.ಐ.ಆರ್ ತಂತ್ರಾಂಶದ ಮೂಲಕ 385 ಕಳುವಾದ ಮೊಬೈಲ್ ಪೋನ್‌ಗಳ ಪತ್ತೆ, ಒಟ್ಟು 1.15 ಕೋಟಿ ಮೌಲ್ಯದ ಸೊತ್ತು ವಶಪಡಿಸಿಕೊಂಡು ಸಾರ್ವಜನಿಕರಿಗೆ ನೆರವು

ಬೆಂಗಳೂರು ನಗರದ ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ನಡೆಸಿ, 2026ನೇ ಸಾಲಿನ ಮಾರ್ಚ್ ಮಾಹೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 1.15 ಕೋಟಿ ಮೌಲ್ಯದ 385 ಮೊಬೈಲ್ ಪೋನ್‌ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯು ಕೇಂದ್ರ ಸರ್ಕಾರದ ಸಿ.ಇ.ಐ.ಆರ್ (CEIR) ಪೋರ್ಟಲ್‌ನ ಪರಿಣಾಮಕಾರಿ ಬಳಕೆಯಿಂದ ಸಾಧ್ಯವಾಗಿದ್ದು, ವಿಭಾಗದ 14 ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಿರಂತರ ಶ್ರಮವಹಿಸಿದ್ದಾರೆ.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ವಿಕ್ರಮ್ ಅಮಟೆ ರವರ ಮಾರ್ಗದರ್ಶನದಲ್ಲಿ ಈ ತಂಡವು ಅತಿ ಹೆಚ್ಚು ಮೊಬೈಲ್‌ಗಳನ್ನು ಬಾಣಸವಾಡಿ (87) ಮತ್ತು ಜೆ.ಬಿ ನಗರ (81) ಠಾಣಾ ವ್ಯಾಪ್ತಿಗಳಲ್ಲಿ ಪತ್ತೆ ಮಾಡಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಕೊಂಡ ತಕ್ಷಣ ಸಿ.ಇ.ಐ.ಆರ್ ಪೋರ್ಟಲ್‌ನಲ್ಲಿ ವಿವರ ದಾಖಲಿಸುವುದು ಅಥವಾ ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಅವುಗಳನ್ನು ಸುಲಭವಾಗಿ ಪತ್ತೆ ಮಾಡಲು ಸಹಕಾರಿಯಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News