ದಿನಸಿ ತರಲು ಹೋಗಿದ್ದಾಗ ಮನೆ ಬಾಗಿಲು ಮುರಿತ, ಜಯನಗರದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯಿಂದ 240 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನ ಜಪ್ತಿ
ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿ ವಾಸವಾಗಿರುವ ದೂರುದಾರರು ದಿನಾಂಕ: 30/03/2026 ರಂದು ದಿನಸಿ ತರಲು ಹೊರಹೋದ ಸಮಯದಲ್ಲಿ ಮನೆಯ ಬೀಗ ಮುರಿದು ಕಳವು ಮಾಡಲಾಗಿತ್ತು. ದೂರಿನ ಪ್ರಕಾರ ಸುಮಾರು 423 ಗ್ರಾಂ ಚಿನ್ನಾಭರಣ, 110 ಗ್ರಾಂ ಬೆಳ್ಳಿ ಹಾಗೂ 50,000 ನಗದು ಕಳುವಾಗಿತ್ತು.
ತನಿಖೆ ಕೈಗೊಂಡ ತಿಲಕನಗರ ಪೊಲೀಸರು ದಿನಾಂಕ: 06/04/2026 ರಂದು ಬಾಣಸವಾಡಿಯ ಹೋಟೆಲ್‌ವೊಂದರ ಬಳಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 35 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಮೊಹಮ್ಮದ್ ಸುಜೀತ ಎಂ ಎಸ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೈಕೋಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಶಿವಶಂಕರ್‌ರೆಡ್ಡಿರವರ ನೇತೃತ್ವದಲ್ಲಿ, ತಿಲಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ವಿಶ್ವನಾಥ್ ಕೆ ಮತ್ತು ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ತಂಡವು ಈ ಮನೆ ಕಳವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್