ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನದ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಮೊದಲು ವೀರಸಂದ್ರ ಕೆರೆ ಬಳಿ ಓರ್ವ ಆರೋಪಿಯನ್ನು ಬಂಧಿಸಿ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು. ಆರೋಪಿಗಳು ಹೈದರಾಬಾದ್‌ನ ಏಜೆಂಟ್ ಮೂಲಕ ಸೈಬರ್ ಸೆಂಟರ್‌ನಲ್ಲಿ ನಕಲಿ ಆರ್ ಸಿ ಕಾರ್ಡ್‌ಗಳನ್ನು ತಯಾರಿಸಿ, ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡುವ ಮೂಲಕ ಕದ್ದ ವಾಹನಗಳನ್ನು ಮಾರಾಟ ಮಾಡುತ್ತಿದ್ದರು.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಆಂಧ್ರಪ್ರದೇಶದ ನಂದಿಹಾಲ್‌ನಲ್ಲಿ ನಕಲಿ ಆರ್.ಸಿ ಕಾರ್ಡ್ ತಯಾರಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ಆತನಿಂದ ಕಾರ್ಡ್ ತಯಾರಿಸಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ 501 ನಕಲಿ ಆರ್.ಸಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಿಂದ ಹೆಬ್ಬಗೋಡಿ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳು ಹಾಗೂ ತಮಿಳುನಾಡು, ದಾವಣಗೆರೆಯ ಒಟ್ಟು 27 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ. ನಾರಾಯಣ ಎಂ ಮತ್ತು ಎಸಿಪಿ ಶ್ರೀ. ಕೆ ಎಂ ಸತೀಶ್ ರವರ ಮಾರ್ಗದರ್ಶನದಲ್ಲಿ ಹೆಬ್ಬಗೋಡಿ ಇನ್ಸ್‌ಪೆಕ್ಟರ್ ಶ್ರೀ. ಸೋಮಶೇಖರ್ ಬಿ ಹಾಗೂ ತಂಡದವರು ನಡೆಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್