Share News

ಬೆಂಗಳೂರು: ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರಾಗಿ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ, ಸೊರಬದ ಹೆಮ್ಮೆಯ ಪುತ್ರ ಶ್ರೀ ಕೆ. ಪರಶುರಾಮ್ (IPS) ಅವರು 2025-26ನೇ ಸಾಲಿನ ಪ್ರತಿಷ್ಠಿತ “ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ” (DG & IGP Commendation Disc) ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಇಡೀ ಸೊರಬ ಕ್ಷೇತ್ರ ಹಾಗೂ ಸುರಬಿಪುರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.

​ಬೆಂಗಳೂರಿನಂತಹ ಅತಿದೊಡ್ಡ ಮಹಾನಗಡದಲ್ಲಿ ಹಗಲಿರುಳು ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಡುವುದು ಮತ್ತು ರಸ್ತೆ ಸುರಕ್ಷತೆಯನ್ನು ಕಾಪಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಕೆ. ಪರಶುರಾಮ್ ಅವರು ಸಾರ್ವಜನಿಕ ಸೇವೆಗೆ ನೀಡಿದ ಅಚಲ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಈ ಅತ್ಯುನ್ನತ ಗೌರವವನ್ನು ನೀಡಲಾಗಿದೆ.

ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿ, ಇಡೀ ನಮ್ಮ ನಾಡಿಗೆ ಕೀರ್ತಿ ತಂದಿರುವ ತಮಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ವೃತ್ತಿ ಜೀವನದಲ್ಲಿ ಇಂತಹ ಇನ್ನೂ ಅನೇಕ ಯಶಸ್ಸು ಹಾಗೂ ಉನ್ನತ ಗೌರವಗಳು ನಿಮ್ಮ ಮುಡಿಗೇರಲಿ ಎಂದು ‘ಅರಕ್ಷಕರ ಟೈಮ್ಸ್ ಮೀಡಿಯಾ’ ವತಿಯಿಂದ ಹಾರೈಸುತ್ತೇವೆ.

 


Share News