Share News

ಶಿವಮೊಗ್ಗ (ಹೊಳೆಹೊನ್ನೂರು): ಶಿವಮೊಗ್ಗ ಗ್ರಾಮಾಂತರ ಭಾಗದ ತೋಟ-ತುಡಿಕೆಗಳಲ್ಲಿ ಮೋಟಾರ್ ಪಂಪ್‌ಸೆಟ್‌ಗಳಿಂದ ಕಾಪರ್ ವೈಯರ್ ಕಳವು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹೊಳೆಹೊನ್ನೂರು ಠಾಣೆಯ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಗಳು:

ಶಿವಮೊಗ್ಗ ವಿದ್ಯಾನಗರದ ನಿವಾಸಿ ತೇಜಸ್ (21) ಮತ್ತು ಮಲ್ಲಿಗೆನಹಳ್ಳಿ ಭೋವಿ ಕಾಲೋನಿಯ ಅನಿಲ್ (24) ಬಂಧಿತ ಆರೋಪಿಗಳಾಗಿದ್ದಾರೆ.

​ಪ್ರಕರಣದ ಹಿನ್ನೆಲೆ ಹಾಗೂ ಜಪ್ತಿ ಉದ್ಯಮ:

ಇತ್ತೀಚೆಗೆ ಸಮೀಪದ ಭದ್ರಾಪುರ ಗ್ರಾಮದಲ್ಲಿ 40ಕ್ಕೂ ಹೆಚ್ಚು ಕೃಷಿ ಮೋಟಾರ್‌ಗಳಿಗೆ ಅಳವಡಿಸಲಾಗಿದ್ದ ಸುಮಾರು ₹3.30 ಲಕ್ಷ ಮೌಲ್ಯದ ಕಾಪರ್ ವೈರ್ ಕಳ್ಳತನವಾಗಿತ್ತು. ಈ ಸಂಬಂಧ ಭದ್ರಾಪುರದ ರೈತ ವಾಗೀಶ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಹೊಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

​ಆರೋಪಿಗಳಿಂದ ₹1.10 ಲಕ್ಷ ಮೌಲ್ಯದ 110 ಮೀಟರ್ ಕಾಪರ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಬೈಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಕಳವು ಮಾಡಿದ ವೈರ್‌ಗಳನ್ನು ಸುಟ್ಟು ತಾಮ್ರವನ್ನು ಪ್ರತ್ಯೇಕಿಸಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.


Share News