Subscribe Now
Trending News

Author: Arakshakara Times Media

ಕ್ರೈಂ ಸುದ್ದಿಗಳು

ಚಿಕ್ಕಬಳ್ಳಾಪುರದಲ್ಲಿ ಬಟ್ಲಹಳ್ಳಿ ಪೊಲೀಸರ ಬರ್ಜರಿ ಕಾರ್ಯಾಚರಣೆ: 150 ನಾಡಬಾಂಬ್, ಬಂದೂಕು ಜಪ್ತಿ, ಓರ್ವನ ಬಂಧನ 

ಚಿಕ್ಕಬಳ್ಳಾಪುರ: ಜಿಲ್ಲೆಯ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ​ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 150 ನಾಡಬಾಂಬ್‌ಗಳು ಹಾಗೂ 1 ನಾಡಬಂದೂಕನ್ನು ಜಪ್ತಿ ಮಾಡಿದ್ದಾರೆ....
ಕ್ರೈಂ ಸುದ್ದಿಗಳು

ಮನೆಯ ಹಿತ್ತಲಲ್ಲಿ ಅಕ್ರಮ ಗಾಂಜಾ ಬೆಳೆ: ಧಾರವಾಡದಲ್ಲಿ 3.32 ಕೆಜಿ ಗಾಂಜಾ ಜಪ್ತಿ, ಓರ್ವನ ಬಂಧನ 

ಧಾರವಾಡ/ನವಲಗುಂದ: ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ. ​ಬೆಳಗಾವಿ ವಿಭಾಗದ ಅಬಕಾರಿ ಜಂಟಿ...
ಕ್ರೈಂ ಸುದ್ದಿಗಳು

ಬಾಗಿಲು ಮುರಿದು ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ — ₹1.49 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ! 

ಚಾಮರಾಜನಗರ: ತಾಲೂಕಿನ ವಡ್ಡಲಪುರ ಗ್ರಾಮಹುಂಡಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದಸ್ತಗಿರಿ ಮಾಡಲಾಗಿದ್ದು, ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಬಂಧಿತ ಆರೋಪಿಯನ್ನು ಅದೇ ಗ್ರಾಮದ ನಿವಾಸಿ...
ಕ್ರೈಂ ಸುದ್ದಿಗಳು

ಕೆ.ಜಿ.ಎಫ್ ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಸಮರ: MDMA ಹಾಗೂ ಗಾಂಜಾ ಜಪ್ತಿ — ಐದು ಆರೋಪಿಗಳ ಬಂಧನ, ₹4 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶ! 

​ಕೆ.ಜಿ.ಎಫ್: ಜಿಲ್ಲೆಯನ್ನು ಸಂಪೂರ್ಣ ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕೆ.ಜಿ.ಎಫ್ ಜಿಲ್ಲಾ ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಬೃಹತ್ ಯಶಸ್ಸು ಸಿಕ್ಕಿದೆ. ಊರಿಗಾಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ MDMA ಹಾಗೂ ಗಾಂಜಾ...
ಕ್ರೈಂ ಸುದ್ದಿಗಳು

ಪಟಾಕಿ ಅಂಗಡಿ ಲೈಸೆನ್ಸ್‌ಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿ ಕಚೇರಿ ಸಹಾಯಕ! 

ತುಮಕೂರು: ಪಟಾಕಿ ಮಾರಾಟ ಅಂಗಡಿಗಳ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಕಚೇರಿ ಸಹಾಯಕನನ್ನು (OA) ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ​ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಕಚೇರಿ ಸಹಾಯಕ B. ಮುರಳಿಧರ್ ಲೋಕಾಯುಕ್ತ...
ಜಿಲ್ಲಾ ಸುದ್ದಿಗಳು

ಆಟೋದಲ್ಲಿ ಬಿಟ್ಟು ಹೋಗಿದ್ದ ₹3.50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ನೆಕ್ಲೇಸ್ ವಾಪಸ್ — ಚಾಲಕ ಬಸವರಾಜ್ ಪ್ರಾಮಾಣಿಕತೆಗೆ ವ್ಯಾಪಕ ಶ್ಲಾಘನೆ! 

ಮಂಗಳೂರು: ತಮ್ಮ ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಒಳಗೊಂಡ ಬ್ಯಾಗ್‌ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ಮಂಗಳೂರಿನ ಆಟೋ ಚಾಲಕ ಬಸವರಾಜ್ ಅವರು ಸಮಾಜಕ್ಕೆ ಮಾದರಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ....
ಕ್ರೈಂ ಸುದ್ದಿಗಳು

ಕೋಲಾರದಲ್ಲಿ ಭಾರಿ ಪ್ರಮಾಣದ ಅಸುರಕ್ಷಿತ ಅಡಿಕೆ ಜಪ್ತಿ: ಆಹಾರ ಸುರಕ್ಷತಾ ಅಧಿಕಾರಿಗಳ ಭರ್ಜರಿ ದಾಳಿ, 174 ಚೀಲ ವಶ! 

ಕೋಲಾರ: ಅಸ್ಸಾಂ ಹಾಗೂ ಕೋಲ್ಕತ್ತಾದಿಂದ ಕರ್ನಾಟಕ ಮತ್ತು ನೆರೆರಾಜ್ಯಗಳಿಗೆ ಸಾಗಿಸಲಾಗುತ್ತಿದ್ದ ಬೃಹತ್ ಪ್ರಮಾಣದ ಅಸುರಕ್ಷಿತ ಹಾಗೂ ಕಳಪೆ ಗುಣಮಟ್ಟದ ಅಡಿಕೆ ಜಾಲವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಭೇದಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ದಾಳಿ ನಡೆಸಿರುವ...
ಕ್ರೈಂ ಸುದ್ದಿಗಳು

ವೃದ್ಧೆಯ ಕೊರಳಿನ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಖದೀಮರ ಬಂಧನ — ₹3.70 ಲಕ್ಷ ಮೌಲ್ಯದ ವಸ್ತುಗಳು ವಶ! 

ಹುಕ್ಕೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಗೆ ಬೆದರಿಕೆಯೊಡ್ಡಿ ಬಂಗಾರದ ಸರ ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 3 ಪ್ರಕರಣಗಳಲ್ಲಿ ಭಾಗಿಯಾದ ₹3.70 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ. ​ಗೋಕಾಕ...
ಕ್ರೈಂ ಸುದ್ದಿಗಳು

ಚಿಂತಾಮಣಿಯಲ್ಲಿ ಅಬಕಾರಿ ಇಲಾಖೆ ಭರ್ಜರಿ ದಾಳಿ: ₹7 ಲಕ್ಷ ಮೌಲ್ಯದ ಎಂಡಿಎಂಎ, ಕೊಕೇನ್ ಜಪ್ತಿ, ಇಬ್ಬರು ಆರೋಪಿಗಳ ಬಂಧನ! 

ಚಿಂತಾಮಣಿ: ನಗರದ ಕನ್ನಪಲ್ಲಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಪಾಯಕಾರಿ ಮಾದಕ ವಸ್ತುಗಳನ್ನು (ಡ್ರಗ್ಸ್) ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ​ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು,...
ಕ್ರೈಂ ಸುದ್ದಿಗಳು

ರಾಜ್ಯದಲ್ಲಿ ನಕಲಿ ಆ್ಯಂಟಿಬಯೋಟಿಕ್ ದಂಧೆ: 15 ಸಾವಿರ ನಕಲಿ ವಯಲ್‌ಗಳ ವಿತರಣೆ — SIT ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲು 

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲದ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ಚುರುಕುಗೊಳಿಸಿದ್ದು, ಕಳೆದೆರಡು ವರ್ಷಗಳಲ್ಲಿ ಬರೋಬ್ಬರಿ 15 ಸಾವಿರ ನಕಲಿ ಆ್ಯಂಟಿಬಯೋಟಿಕ್ ವಯಲ್‌ಗಳನ್ನು ಸಾರ್ವಜನಿಕರಿಗೆ ವಿತರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ​ಫೈಜರ್ ಲೇಬಲ್ ಬಳಸಿ ಜೆನೆರಿಕ್...