Share News

*ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗಳು, ನಮ್ಮ-112 ಸಹಾಯವಾಣಿಯಿಂದ ಸಕಾಲಿಕ ಸ್ಪಂದನೆ, ಸಾರ್ವಜನಿಕರ ಜಾಗೃತಿ ಹಾಗೂ ಪೊಲೀಸರ ಮಾನವೀಯ ಕಾರ್ಯಕ್ಕೆ ಶ್ಲಾಘನೆ*

ಬೆಂಗಳೂರು ನಗರ ಪೊಲೀಸ್ ಇಲಾಖೆಯು ಇತ್ತೀಚೆಗೆ ಮೂರು ಪ್ರತ್ಯೇಕ ಘಟನೆಗಳಲ್ಲಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

“ರಾಮಮೂರ್ತಿನಗರ” ಮತ್ತು “ಕೆ ಆರ್ ಪುರಂ” ವ್ಯಾಪ್ತಿಯಲ್ಲಿ ದಾರಿತಪ್ಪಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಬಾಲಕರನ್ನು (11 ವರ್ಷ ಮತ್ತು 3 ವರ್ಷ) ನಮ್ಮ-112 ಮತ್ತು ಹೊಯ್ಸಳ ಸಿಬ್ಬಂದಿ ಕೇವಲ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ಅವರ ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಮತ್ತೊಂದು ಗಂಭೀರ ಪ್ರಕರಣದಲ್ಲಿ, “ಜ್ಞಾನಭಾರತಿ” ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಸಮಸ್ಯೆಯಿಂದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 30 ವರ್ಷದ ಮಹಿಳೆಯನ್ನು ಪೊಲೀಸರು 12 ನಿಮಿಷಗಳಲ್ಲಿ ತಲುಪಿ, ಕೂಡಲೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ. ಈ ಎಲ್ಲಾ ಕಾರ್ಯಾಚರಣೆಗಳು ಸಾರ್ವಜನಿಕರ ಜಾಗೃತಿ ಮತ್ತು ಪೊಲೀಸರ ದಕ್ಷತೆಯನ್ನು ಎತ್ತಿ ತೋರಿಸಿವೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News