Subscribe Now
Trending News

Category: ಜಿಲ್ಲಾ ಸುದ್ದಿಗಳು

ಜಿಲ್ಲಾ ಸುದ್ದಿಗಳು

ಕಲಬುರಗಿ: ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಶಾಲೂ ಐಪಿಎಸ್ ಅಧಿಕಾರ ಸ್ವೀಕಾರ 

ಕಲಬುರಗಿ: ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (DCP) ಶಾಲೂ ಐಪಿಎಸ್ ಅವರು ಇಂದು ಅಧಿಕಾರ ವಹಿಸಿಕೊಂಡರು. ​ಕಲಬುರಗಿ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಈ...
ಜಿಲ್ಲಾ ಸುದ್ದಿಗಳು

ಅರ್ಹರಿಗೆ ಮಾತ್ರ ನಿವೇಶನ ಹಂಚಿಕೆಯಾಗಲಿ; ಅನರ್ಹರ ಅರ್ಜಿ ಪುರಸ್ಕರಿಸಬೇಡಿ: ತಹಶೀಲ್ದಾರ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ 

ಕನಕಪುರ: “ಆಶ್ರಯ ಯೋಜನೆಯಡಿ ಕನಕಪುರ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಂಚಿಕೆ ಮಾಡಬೇಕು. ಈಗಾಗಲೇ ನಿವೇಶನ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಿ,” ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ...
ಕ್ರೈಂ ಸುದ್ದಿಗಳು

ರಾಯಚೂರು: ಅಬಕಾರಿ ಇಲಾಖೆ ಮಿಂಚಿನ ದಾಳಿ; ಕಿಲೋ ಗಟ್ಟಲೆ ಮಾದಕ ದ್ರವ್ಯ ಜಪ್ತಿ, ಆರೋಪಿ ಬಂಧನ 

ರಾಯಚೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಮರ ಸಾರಿರುವ ಅಬಕಾರಿ ಇಲಾಖೆಯು ಭರ್ಜರಿ ಬೇಟೆಯಾಡಿದೆ. ಗುಪ್ತ ಮಾಹಿತಿ ಆಧರಿಸಿ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಅಪಾರ ಪ್ರಮಾಣದ ಮಾದಕ ರಾಸಾಯನಿಕಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೇ 1ರಂದು ರಾಯಚೂರು...
ಕ್ರೈಂ ಸುದ್ದಿಗಳು

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ 26 ವರ್ಷದ ಗೃಹಿಣಿ ಬಲಿ; 3 ತಿಂಗಳ ಕಂದಮ್ಮ ಅನಾಥ 

ವರದಕ್ಷಿಣೆಯೆಂಬ ರಾಕ್ಷಸನ ದಾಹಕ್ಕೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿ ಸಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 26 ವರ್ಷದ ವಂದನಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೇವಲ ಮೂರು ತಿಂಗಳ ಹಸುಗೂಸು ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಬೆಟ್ಟದಾಸನಪುರ...
ಜಿಲ್ಲಾ ಸುದ್ದಿಗಳು

ಕ್ಯಾನ್ಸರ್ ವಿರುದ್ಧದ ಹೋರಾಟ ಅಂತ್ಯ: ದಕ್ಷ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಇನ್ನಿಲ್ಲ 

ಬೆಂಗಳೂರು: ನಾಡಿನ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಎಸ್ಪಿ ಬಿ.ಎನ್. ಲಾವಣ್ಯ (40) ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು...
ಜಿಲ್ಲಾ ಸುದ್ದಿಗಳು

ಹೊನ್ನಾವರ: ಶರಾವತಿ ನದಿಗೆ ಉರುಳಿದ ಪ್ರವಾಸಿಗರ ವಾಹನ; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು 

ಹೊನ್ನಾವರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಭಿಕಾಸಿತಾರಿಯ ಶರಾವತಿ ಬೋಟಿಂಗ್ ಪಾಯಿಂಟ್‌ನಲ್ಲಿ ಇಂದು ಪ್ರವಾಸಿಗರ ಟಿ.ಟಿ (Traveler) ವಾಹನವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ವಾಹನದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದರಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ....
ಕ್ರೈಂ ಸುದ್ದಿಗಳು

ಸಾರಿಗೆ ಇಲಾಖೆಯ ನಿರ್ಲಕ್ಷ್ಯ: ಮದ್ಯ ವ್ಯಸನಿಗಳ ಅಡ್ಡೆಯಾದ ಮಾದನಹಳ್ಳಿ ಬಸ್ ತಂಗುದಾಣ ಬಸ್ ತಂಗುದಾಣವೋ ಅಥವಾ ಮದ್ಯದಂಗಡಿಯೋ? 

ನಂಜನಗೂಡು: ಪ್ರಯಾಣಿಕರ ವಿಶ್ರಾಂತಿಗಾಗಿ ಕೋಟಿಗಟ್ಟಲೆ ವೆಚ್ಚ ಮಾಡಿ ನಿರ್ಮಿಸುವ ಬಸ್ ನಿಲ್ದಾಣಗಳು ಇಂದು ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ನಂಜನಗೂಡು ತಾಲೂಕಿನ ಮಾದನಹಳ್ಳಿ ಬಸ್ ನಿಲ್ದಾಣ. ಹಗಲಿನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಈ ನಿಲ್ದಾಣ, ಸೂರ್ಯ ಮುಳುಗುತ್ತಿದ್ದಂತೆ ಕುಡುಕರ...
ಕ್ರೈಂ ಸುದ್ದಿಗಳು

ಮೆಡಿಕಲ್ ಶಾಪ್‌ಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದಿಢೀರ್ ಭೇಟಿ: ನಿಯಮ ಉಲ್ಲಂಘನೆ ವಿರುದ್ಧ ಎಚ್ಚರಿಕೆ 

ಚಾಮರಾಜನಗರ:- ನಗರದ ವಿವಿಧ ಮೆಡಿಕಲ್ ಶಾಪ್‌ಗಳಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಔಷಧ ಮಾರಾಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು....
ಜಿಲ್ಲಾ ಸುದ್ದಿಗಳು

ಬಿಸಿಲಿನ ಬೇಗೆಯ ನಡುವೆ ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ವರದಿ 

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣ ಅಲೆ (Heat Wave) ಮುಂದುವರಿಯುತ್ತಿರುವ ಬೆನ್ನಲ್ಲೇ, ಹವಾಮಾನ ಇಲಾಖೆಯು ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಿದೆ. ನಿನ್ನೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಸುರಿದ ಮಳೆಯು ಜನರಿಗೆ ಸುಡು...
ಕ್ರೈಂ ಸುದ್ದಿಗಳು

ಮಾದಕ ವಸ್ತು ತಡೆಗೆ ರೆಸಾರ್ಟ್, ಹೋಂ ಸ್ಟೇಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ 

ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸರಬರಾಜನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅನುಮಾನಾಸ್ಪದವಾಗಿ ಕಂಡುಬರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ​ಮಂಗಳವಾರ ಜಿಲ್ಲಾಧಿಕಾರಿಗಳ...