ಚನ್ನಪಟ್ಟಣ: ಚಲಿಸುತ್ತಿದ್ದ ಬೈಕ್ ಮೇಲೆ ಕರಡಿ ದಾಳಿ; ಸವಾರ ಪ್ರಾಣಾಪಾಯದಿಂದ ಪಾರು
ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ-ಸಿಂಗರಾಜಿಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಕರಡಿಯೊಂದು ಭೀಕರ ದಾಳಿ ನಡೆಸಿದ್ದು, ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ-ಸಿಂಗರಾಜಿಪುರ ರಸ್ತೆಯ ದುಂಡುಮಾರಮ್ಮ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬರು ತಮ್ಮ...
ಬೆಂಗಳೂರು: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ಬಾಲಕಿ ಭೀಕರ ಕೊಲೆ; ಅತ್ಯಾಚಾರದ ಶಂಕೆ
ಬೆಂಗಳೂರು: ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಶನಿವಾರ ಸಂಜೆ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಸ್ಸಾಂ ಮೂಲದ ಈ ಬಾಲಕಿ ವಿಟ್ಟಸಂದ್ರ ಸಮೀಪದ...
ಭಟ್ಕಳ: ದಕ್ಷ ಪೊಲೀಸ್ ಅಧಿಕಾರಿ ನವೀನ್ ಎಸ್. ನಾಯ್ಕ ಅವರಿಗೆ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ದ ಗರಿ
ಭಟ್ಕಳ: ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆಯನ್ನು ಪರಿಗಣಿಸಿ, ಭಟ್ಕಳ ನಗರ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ನವೀನ್ ಎಸ್. ನಾಯ್ಕ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮಾನ್ಯ ಮುಖ್ಯಮಂತ್ರಿಯವರ ಪದಕ’ ಘೋಷಣೆಯಾಗಿದೆ. ರಾಜ್ಯ ಸರ್ಕಾರವು ಅಧಿಕೃತವಾಗಿ ಪದಕ ವಿಜೇತರ...
ಶಿರಸಿಯ ‘ಸಿಂಗಂ’ ಖ್ಯಾತಿಯ ಪಿಎಸ್‌ಐ ರಾಜಕುಮಾರ್ ಉಕ್ಕಲಿಗೆ 2025ರ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ ಗೌರವ
ಶಿರಸಿ: ಕರ್ತವ್ಯನಿಷ್ಠೆ, ಅದಮ್ಯ ಸಾಹಸ ಮತ್ತು ಅಪರಾಧ ಪತ್ತೆ ಹಚ್ಚುವಲ್ಲಿ ತೋರಿದ ಅಪ್ರತಿಮ ದಕ್ಷತೆಗಾಗಿ ಶಿರಸಿ ಮಾರ್ಕೆಟ್ ಠಾಣೆಯ ಕ್ರೈಂ ಪಿಎಸ್‌ಐ ರಾಜಕುಮಾರ್ ಉಕ್ಕಲಿ ಅವರು 2025ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿಯವರ ಪದಕಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕ್ರಿಯಾಶೀಲ ಮತ್ತು...
ಬೆಕ್ಕಿನ ಹೆಜ್ಜೆ ಇಟ್ಟ ಪ್ರೊಫೆಸರ್ ಅಬ್ದುಲ್ ಅರೆಸ್ಟ್: ಕ್ಲಾಸಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಚಪ್ಪಲಿ ಸೇವೆ ಪಡೆದ ಕಾಮುಕ!
ನೆಲಮಂಗಲ: ತರಗತಿಯಲ್ಲಿ ಪಾಠ ಮಾಡಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬ ವಿದ್ಯಾರ್ಥಿನಿಗೆ ಮೈಕ್‌ನಲ್ಲೇ ಪ್ರಪೋಸ್ ಮಾಡಿ ಪೊಲೀಸರ ಅತಿಥಿಯಾದ ಘಟನೆ ನೆಲಮಂಗಲದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಆರೋಪಿ ಅಬ್ದುಲ್ ಎಂಬಾತನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಸಿಸ್ಟೆಂಟ್ ಪ್ರೊಫೆಸರ್...
ಸಕಲೇಶಪುರ: ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ಭೀಕರ ದಾಳಿ; ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಲಕ್ಷಾಂತರ ಮೌಲ್ಯದ ಕ್ಯಾಮೆರಾ ಪುಡಿ
ಸಕಲೇಶಪುರ (ಮಾರ್ಚ್ 28, 2026): ಇಲ್ಲಿನ ಸುಂದರ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ರೌಡಿ ವರ್ತನೆಯ ಕಿಡಿಗೇಡಿಗಳ ಗುಂಪೊಂದು ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ದಾಳಿಯ ವೇಳೆ ಲಕ್ಷಾಂತರ ರೂಪಾಯಿ...
ಚಿತ್ರದುರ್ಗ: ಹಳೇ ದ್ವೇಷ ಹಾಗೂ ರಾಜಿ ವಿಚಾರಕ್ಕೆ ಗಲಾಟೆ; ದೊಡ್ಡಪ್ಪನಿಂದಲೇ ತಮ್ಮನ ಮಗನ ಹತ್ಯೆ
ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಚಿತ್ರದುರ್ಗದ ಭೀಮಸಮುದ್ರ ಕ್ಯಾಂಪ್‌ನಲ್ಲಿ ನಡೆದಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ರಾಜಿ ವಿಚಾರದಲ್ಲಿ ನಡೆದ ಕಿರಿಕ್, ದೊಡ್ಡಪ್ಪನಿಂದಲೇ ತಮ್ಮನ ಮಗನ ಹತ್ಯೆಗೆ ಕಾರಣವಾಗಿದೆ. ಹತ್ಯೆಯಾದ ಯುವಕನನ್ನು ಕಾಂತರಾಜ್ (34) ಎಂದು ಗುರುತಿಸಲಾಗಿದೆ....
ನಾಳೆಯಿಂದ ಐಪಿಎಲ್ ಹಬ್ಬ: ಭದ್ರತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಸಭೆ
ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಪಂದ್ಯಾವಳಿಗಳು ನಾಳೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಇಂದು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕ...
ಬೀಗ ಮುರಿದು ಚಿನ್ನದ ಜೊತೆ ಗೋವಾಕ್ಕೆ ಹಾರಿದ್ದ, ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದ, ಬಾಡಿ ವಾರೆಂಟ್ ಮೂಲಕ ವಿಚಾರಣೆಯ ವೇಳೆ ಬಾಯ್ಬಿಟ್ಟ
ರಾಮಮೂರ್ತಿ ನಗರದಲ್ಲಿ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 79 ಲಕ್ಷ ಮೌಲ್ಯದ 527 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಯ್ಸಳ ನಗರದಲ್ಲಿ ವಾಸವಿದ್ದ ಪಿರ್ಯಾದುದಾರರ ಮಗ ಮತ್ತು...
ಮೊಬೈಲ್ ಕಳವಿಗೆ ಹೊಸ ಮಾದರಿ ಸೃಷ್ಟಿ, ಪಾರ್ಕಿಂಗ್ – ಹೈವೇ ದಾರಿಯಲ್ಲಿ ದೋಚುವ ಮುಷ್ಟಿ, ಹೆಚ್.ಎ.ಎಲ್ ಪೊಲೀಸರಿಂದ ಕಿಲಾಡಿ ಖದೀಮನ ಜಪ್ತಿ
ನಗರದ ವಿವಿಧೆಡೆ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜು ಒಡೆದು ಹಾಗೂ ಹೈವೇಗಳಲ್ಲಿ ವಿಶ್ರಮಿಸುತ್ತಿದ್ದ ಚಾಲಕರ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಹೆಚ್.ಎ.ಎಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 16 ಲಕ್ಷ ಮೌಲ್ಯದ 64 ಮೊಬೈಲ್ ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ...