Share News

ಚಿಂತಾಮಣಿ: ತಾಲೂಕಿನ ಜಗತನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿರುವ ಸುಮಾರು 60ರಿಂದ 70 ಅಡಿ ಆಳದ ಕಲ್ಲಿನ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಎರಡು ಕೃಷ್ಣಮೃಗಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.

​ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗತನಹಳ್ಳಿಯ ಭೂಮರೆಡ್ಡಿ ಬಿನ್ ಬೈರಪ್ಪ ಅವರಿಗೆ ಸೇರಿದ ಜಮೀನಿನ ಬಾವಿಯಲ್ಲಿ ಕೃಷ್ಣಮೃಗಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

​ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಹಗ್ಗಗಳ ನೆರವಿನಿಂದ ಸಾಹಸಿಕ ಕಾರ್ಯಾಚರಣೆ ನಡೆಸಿ ಎರಡೂ ಕೃಷ್ಣಮೃಗಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

​ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಜಯನಾಯಕ, ಲೋಕೇಶ್, ಶಶಿಧರ, ವಿವೇಕ್, ರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.


Share News