ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ವೇಳೆ ಕಾಲಿನ ಮೇಲೆ ಭಾರಿ ತೂಕದ ಕಬ್ಬಿಣ ಬಿದ್ದು ಕಾರ್ಮಿಕರೊಬ್ಬರು ತೀವ್ರವಾಗಿ ಗಾಯಗೊಂಡು ಕಾಲು ಜಖಂಗೊಂಡಿರುವ ಘಟನೆ ವರದಿಯಾಗಿದೆ.
ಸಂಗತಿಯ ವಿವರ:
ಗಾಯಗೊಂಡ ಕಾರ್ಮಿಕನನ್ನು ಚೆನ್ನೇಗೌಡ ಎಂದು ಗುರುತಿಸಲಾಗಿದೆ. ಸುಮಾರು 5 ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿತ್ತು. ಘಟನೆ ನಡೆದ ತಕ್ಷಣ ಚೆನ್ನೇಗೌಡ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ ಕಾರ್ಖಾನೆ ಆಡಳಿತ ಮಂಡಳಿ, ತದನಂತರ ಅವರ ಯೋಗಕ್ಷೇಮ ಹಾಗೂ ಸೂಕ್ತ ಪರಿಹಾರ ನೀಡದೆ ಸಂಪೂರ್ಣವಾಗಿ ಕೈಬಿಟ್ಟಿದೆ ಎನ್ನಲಾಗಿದೆ.
ಪೊಲೀಸರ ಮೊರೆ ಹೋದ ಗಾಯಾಳು:
ಕಾಲಿನ ಗಂಭೀರ ಗಾಯದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚೆನ್ನೇಗೌಡ ಅವರು ತಮಗೆ ಸೂಕ್ತ ಪರಿಹಾರ ಒದಗಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಪರಿಹಾರ ನೀಡಲು ಆಡಳಿತ ಮಂಡಳಿ ಮೀನಾಮೇಷ ಎಣಿಸುತ್ತಿದ್ದ ಹಿನ್ನೆಲೆಯಲ್ಲಿ, ನೊಂದ ಕಾರ್ಮಿಕ ಚೆನ್ನೇಗೌಡ ಅವರು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರಿನನ್ವಯ ಕಾರ್ಖಾನೆಯ ವ್ಯವಸ್ಥಾಪಕರು ಹಾಗೂ ಸೂಪರ್ ವೈಸರ್ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Arakshakara Times Media
Related posts
