ತೀರ್ಥಹಳ್ಳಿ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಅಕ್ಕಿ ತುಂಬಿದ್ದ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಸೊಪ್ಪುಗುಡ್ಡೆಯಲ್ಲಿ ಭಾನುವಾರ ನಡೆದಿದೆ.
ಘಟನೆಯ ವಿವರ:
ಇಲ್ಲಿನ ಸುವರ್ಣ ಸಹಕಾರ ಭವನದ ಪಕ್ಕದಲ್ಲಿರುವ ಅನ್ನಭಾಗ್ಯ ಅಕ್ಕಿ ಗೋದಾಮಿನಿಂದ ರಜೆ ದಿನವಾದ ಭಾನುವಾರ ಖಾಸಗಿ ಲಾರಿಗೆ ಅಕ್ಕಿ ಮೂಟೆಗಳನ್ನು ಸ್ಥಳಾಂತರಿಸಲಾಗುತ್ತಿತ್ತು. ರಜೆ ದಿನದಲ್ಲಿ ಅಕ್ಕಿ ಸಾಗಾಟ ಮಾಡಲು ಅವಕಾಶವಿಲ್ಲದಿರುವುದರಿಂದ ಅಕ್ರಮ ಸಾಗಾಟದ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
112 ಪೊಲೀಸರ ಕಾರ್ಯಾಚರಣೆ:
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತೀರ್ಥಹಳ್ಳಿಯ 112 ತುರ್ತು ವಾಹನದ ಪೊಲೀಸರು ಪರಿಶೀಲನೆ ನಡೆಸಿ, ಅಕ್ಕಿ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಾಗಾಟಕ್ಕೆ ಆಹಾರ ಇಲಾಖೆಯಿಂದ ಅಧಿಕೃತ ಅನುಮತಿ ಇತ್ತೇ ಅಥವಾ ಅಕ್ರಮವಾಗಿ ಅಕ್ಕಿ ಕಪ್ಪುಸಂತೆಗೆ ಸಾಗಿಸಲಾಗುತ್ತಿತ್ತೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Arakshakara Times Media
Related posts
