Share News

ಇದೇ ಏಪ್ರಿಲ್ 1 ರಂದು ಬೆಳಗಿನ ಜಾವ 1:38 ಗಂಟೆಗೆ ಗೋವಿಂದರಾಜನಗರದಲ್ಲಿ ಸುಮಾರು 70-75 ವರ್ಷದ ವೃದ್ಧ ಮಹಿಳೆಯೊಬ್ಬರು ಅಲೆದಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ‘ನಮ್ಮ-112’ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ-61 ರ ಸಿಬ್ಬಂದಿಗಳಾದ ಎ ಎಸ್‌ ಐ ಪ್ರಸನ್ನ ಕುಮಾರ್ ಮತ್ತು ಹೆಚ್‌ ಸಿ ವಿನೋದಾ ಅವರು ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ವೃದ್ಧೆಯು ತನ್ನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲು ಅಸಮರ್ಥರಾಗಿದ್ದನ್ನು ಕಂಡು, ಪೊಲೀಸರು ಆಕೆಯ ಸುರಕ್ಷತೆಗಾಗಿ ಸಮೀಪದ “ಆಸರೆ” ವೃದ್ಧಾಶ್ರಮಕ್ಕೆ ದಾಖಲಿಸಿದ್ದಾರೆ. ‘ಸೇಫ್ ಸಿಟಿ’ ಯೋಜನೆಯಡಿ ನಡೆದ ಈ ಕಾರ್ಯಾಚರಣೆಯು ನಾಗರಿಕರ ಜಾಗೃತಿ ಮತ್ತು ಪೊಲೀಸರ ಮಾನವೀಯ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News