Share News

ಮಡಿಕೇರಿ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನೀಡಲಾಗುವ ಪ್ರತಿಷ್ಠಿತ ‘ಡಿ ಜಿ ಮತ್ತು ಐಜಿಪಿ ಕಾಮೆಂಡೇಶನ್ ಡಿಸ್ಕ್’ (DG & IGP Commendation Disc) ಪ್ರಶಂಸನಾ ಪದಕಕ್ಕೆ ಕೊಡಗು ಮೂಲದ ಮಹಿಳಾ ಪೊಲೀಸ್ ಅಧಿಕಾರಿ ಅಂಜಪರವಂಡ ಕವಿತಾ ಕಾರ್ಯಪ್ಪ ಅವರು ಭಾಜನರಾಗಿದ್ದಾರೆ.

​ಕರ್ನಾಟಕ ಪೊಲೀಸ್ ಇಲಾಖೆಯು 2020 ರಿಂದ 2025ನೇ ಸಾಲಿನವರೆಗಿನ ಐದು ವರ್ಷಗಳ ಅವಧಿಯಲ್ಲಿ ಕವಿತಾ ಕಾರ್ಯಪ್ಪ ಅವರು ಸಲ್ಲಿಸಿದ ನಿಷ್ಠಾವಂತ, ದಕ್ಷ ಹಾಗೂ ಶ್ಲಾಘನೀಯ ಕರ್ತವ್ಯವನ್ನು ಪರಿಗಣಿಸಿ ಈ ಗೌರವಾನ್ವಿತ ಪದಕವನ್ನು ಪ್ರಕಟಿಸಿದೆ.

ಅರ್ಹ ಪ್ರಶಂಸನಾ ಪದಕಕ್ಕೆ ಭಾಜನರಾಗಿರುವ ಕವಿತಾ ಕಾರ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ಯುವಕಪಾಡಿ ಗ್ರಾಮದ ಅಂಜಪರವಂಡ ಕುಟುಂಬದವರಾಗಿದ್ದಾರೆ. ಪ್ರಸ್ತುತ ಇವರು ಬೆಂಗಳೂರು ನಗರದ ಉತ್ತರ ಟ್ರಾಫಿಕ್ (ಬೆಂಗಳೂರು ಉತ್ತರ ಸಂಚಾರ ವಿಭಾಗ) ವಿಭಾಗದಲ್ಲಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

​ಕವಿತಾ ಕಾರ್ಯಪ್ಪ ಅವರ ಈ ಸಾಧನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಕೊಡಗು ಜಿಲ್ಲೆಯ ಸಾರ್ವಜನಿಕರು ಮತ್ತು ಗಣ್ಯರು ತೀವ್ರ ಹರ್ಷ ವ್ಯಕ್ತಪಡಿಸಿದ್ದು, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 


Share News