ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ಕನ್ನ ಹಾಕಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳವು ಮಾಡಿದ್ದ ಹೊರರಾಜ್ಯದ ಓರ್ವ ಆರೋಪಿಯನ್ನು ದೂರು ದಾಖಲಾದ ಕೇವಲ 5 ಗಂಟೆಗಳ ಒಳಗೆ ಪೊಲೀಸರು ಬಂಧಿಸಿ, ₹4.5 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ದೂರು: ದಿನಾಂಕ 14/08/2026 ರಂದು ಶ್ರೀ ಸಾಯಿ ಲೇಔಟ್ನ ನಿವಾಸಿಯೊಬ್ಬರು ದೂರು ನೀಡಿದ್ದರು. ಅಂದು ಬೆಳಿಗ್ಗೆ 6:00 ರಿಂದ 9:00 ಗಂಟೆಯ ನಡುವೆ ಮನೆಯವರು ಮಲಗಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಕಿಟಕಿಯಿಂದ ಕೈಹಾಕಿ ಬಾಗಿಲು ತೆಗೆದು ಒಳಪ್ರವೇಶಿಸಿ 3 ಲ್ಯಾಪ್ಟಾಪ್ಗಳು ಮತ್ತು 2 ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದನು.
ಕಾರ್ಯಾಚರಣೆ ಹಾಗೂ ಬಂಧನ: ದೂರು ದಾಖಲಿಸಿಕೊಂಡ ತಕ್ಷಣ ತನಿಖೆ ಆರಂಭಿಸಿದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ವೈಟ್ಫೀಲ್ಡ್ ರೈಲ್ವೇ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಹೆಚ್ಚಿನ ಹಣ ಗಳಿಸುವ ಆಸೆಯಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನ: ಆರೋಪಿಯನ್ನು ದಿನಾಂಕ 14/08/2026 ರಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಡಿಸಿಪಿ ಶ್ರೀ. ಜಿ.ಕೆ. ಮಿಥುನ್ ಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಶ್ರೀ. ಚಂದನ್ ಕುಮಾರ್.ಎನ್ ರವರ ನೇತೃತ್ವದಲ್ಲಿ, ಬಾಗಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಮತಿ. ಪ್ರಶೀಲಾ. ಬಿ.ಎಸ್ ಹಾಗೂ ಅವರ ಅಧಿಕಾರಿ/ಸಿಬ್ಬಂದಿಗಳ ತಂಡ ಪೂರ್ಣಗೊಳಿಸಿದೆ.
Arakshakara Times Media
Related posts
