ವೈಟ್ಫೀಲ್ಡ್ನಲ್ಲಿ ಲಾರಿಯಿಂದ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಬಾಕ್ಸ್ಗಳ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ ₹30 ಲಕ್ಷ ಮೌಲ್ಯದ 130 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ದೂರು: ದಿನಾಂಕ 27/07/2026 ರಂದು ಕಂಪನಿಯೊಂದರ ಮಾಲೀಕರು ದೂರು ನೀಡಿದ್ದರು. ಹೈದರಾಬಾದ್ನಿಂದ ಬಂದಿದ್ದ ಪಾರ್ಸೆಲ್ ಬಾಕ್ಸ್ಗಳನ್ನು ಜುಲೈ 25 ರಂದು ವೈಟ್ಫೀಲ್ಡ್ನ ನಲ್ಲೂರಹಳ್ಳಿ ಕಸ್ಟಮ್ಸ್ ಆಫೀಸ್ ಬಳಿ ಕಂಟೈನರ್ಗೆ ಅನ್ಲೋಡ್ ಮಾಡಿ ಬೀಗ ಹಾಕದೆ ತೆರಳಿದ್ದಾಗ, ಅಪರಿಚಿತರು ಮೊಬೈಲ್ ಇದ್ದ 3 ಪಾರ್ಸೆಲ್ ಬಾಕ್ಸ್ಗಳನ್ನು ಕಳವು ಮಾಡಿದ್ದರು.
ಕಾರ್ಯಾಚರಣೆ ಹಾಗೂ ಬಂಧನ: ಸಿಸಿಟಿವಿ ಹಾಗೂ ಖಚಿತ ಮಾಹಿತಿ ಆಧಾರದ ಮೇಲೆ ಜುಲೈ 28, 2026 ರಂದು ವೈಟ್ಫೀಲ್ಡ್ ಮುಖ್ಯರಸ್ತೆಯ ಬೇಕರಿಯೊಂದರ ಬಳಿ ಆರೋಪಿಯನ್ನು 3 ಪಾರ್ಸೆಲ್ ಬಾಕ್ಸ್ಗಳು ಮತ್ತು ಆಟೋರಿಕ್ಷಾ ಸಮೇತ ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಆತ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ಜುಲೈ 28, 2026 ರಂದೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಶ್ರೀ. ಸೈದುಲು ಅಡಾವತ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ವೈಟ್ಫೀಲ್ಡ್ ಉಪವಿಭಾಗದ ಎಸಿಪಿ ಶ್ರೀಮತಿ. ರೀನಾ ಸುವರ್ಣ ರವರ ನೇತೃತ್ವದಲ್ಲಿ, ವೈಟ್ಫೀಲ್ಡ್ ಇನ್ಸ್ಪೆಕ್ಟರ್ ಶ್ರೀ. ಪ್ರೀತಮ್. ಹಾಗೂ ಅವರ ಸಿಬ್ಬಂದಿಗಳ ತಂಡ ಪೂರ್ಣಗೊಳಿಸಿದೆ.

Arakshakara Times Media
Related posts
