Share News

ಬೆಂಗಳೂರು: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ವಿನೋತ್‌ ಪ್ರಿಯಾ ಆರ್‌. (ಐಎಎಸ್) ಹಾಗೂ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ಶ್ರೀ ದಿನೇಶ್ ಕುಮಾರ್ ಕಳ್ಳೇರ್ ಅವರು ಯಶವಂತಪುರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ‘ಸಶಿಮಿ ಫುಡ್ಸ್ ಪ್ರೈವೇಟ್ ಲಿಮಿಟೆಡ್’‌ನ ಸಂಸ್ಕರಣಾ ಘಟಕಕ್ಕೆ ಆಗಸ್ಟ್ ೬ ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ಘಟಕದಲ್ಲಿ ನಡೆಯುತ್ತಿರುವ ವಿವಿಧ ಸಂಸ್ಕರಣಾ ಚಟುವಟಿಕೆಗಳನ್ನು ವೀಕ್ಷಿಸಿದ ಅಧಿಕಾರಿಗಳ ತಂಡವು, ಸಂಸ್ಥೆಯ ಮಾಲೀಕರಾದ ಶ್ರೀ ಕೇದಾರನಾಥ ರೆಡ್ಡಿ ಅವರೊಂದಿಗೆ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು.

​ಈ ವೇಳೆ ಇತ್ತೀಚಿನ ಸ್ಕಾಟಿಷ್ ಸಾಲ್ಮನ್ ತಳಿಯ ಮೀನುಗಳ ಆಮದು, ದೇಶೀಯ ಮಟ್ಟದಲ್ಲಿ ಮೀನು ಬಳಕೆಯ ಉತ್ತೇಜನ ಹಾಗೂ ರಾಜ್ಯದಲ್ಲಿ ಮೀನು ಸಂಸ್ಕರಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಮಾಲೋಚನೆಗಳನ್ನು ನಡೆಸಲಾಯಿತು.

​ಈ ಉನ್ನತ ಮಟ್ಟದ ಭೇಟಿಯ ಸಂದರ್ಭದಲ್ಲಿ ಬೆಂಗಳೂರು ನಗರ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಚಿಕ್ಕಣ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share News