ಅಪ್ರಾಪ್ತ ಬಾಲಕನಿಗೆ ಕಾರು ಚಾಲನೆ ಮಾಡಲು ನೀಡಿದ್ದ ಮಾಲೀಕನಿಗೆ ಶಿಕ್ಷೆ: ₹30,000 ದಂಡ ಹಾಗೂ 1 ದಿನ ಸಾದಾ ಜೈಲು ಶಿಕ್ಷೆ ವಿಧಿಸಿದ ರಾಣೇಬೆನ್ನೂರು ನ್ಯಾಯಾಲಯ
ರಾಣೇಬೆನ್ನೂರು: ಅಪ್ರಾಪ್ತ ಬಾಲಕನಿಗೆ ಕಾರು ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವಾಹನ ಮಾಲೀಕನಿಗೆ ರಾಣೇಬೆನ್ನೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ (JMFC) ನ್ಯಾಯಾಲಯವು 1 ದಿನದ ಸಾದಾ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ....
ಕಾರಿನ ಸ್ಟೆಪ್ನಿ ಕಳಚಿ ಬಿದ್ದು ಭೀಕರ ಅಪಘಾತ: ರಾಯಚೂರು ಕಾಂಗ್ರೆಸ್ ಮುಖಂಡ ಚೇತನ್ ಕಡಕೋಳಗೆ ಗಂಭೀರ ಗಾಯ
ರಾಯಚೂರು: ಚಲಿಸುತ್ತಿದ್ದ ಕಾರಿನ ಹಿಂಭಾಗದ ಸ್ಟೆಪ್ನಿ ದಿಢೀರ್ ಕಳಚಿ ಬಿದ್ದ ಪರಿಣಾಮ, ನಿಯಂತ್ರಣ ತಪ್ಪಿದ ಕಾರು ಎರಡು ಸುತ್ತು ಪಲ್ಟಿಯಾಗಿ ಮನೆಯ ಕಂಪೌಂಡ್‌ಗೆ ಡಿಕ್ಕಿ ಹೊಡೆದಿರುವ ಭೀಕರ ಘಟನೆ ತೆಲಂಗಾಣದ ಹಿಂದೂಪುರ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ರಾಯಚೂರಿನ ಪ್ರಭಾವಿ ಕಾಂಗ್ರೆಸ್...
ಕಟ್ಟಡ ನಿರ್ಮಾಣದ ಕಬ್ಬಿಣದ ಕಂಬಿ ಕಳವು – ಇಬ್ಬರು ಆರೋಪಿಗಳ ಬಂಧನ, ₹50 ಸಾವಿರ ಮೌಲ್ಯದ ಕಬ್ಬಿಣ ವಶ
ಚನ್ನಪಟ್ಟಣ (ಎಂ.ಕೆ. ದೊಡ್ಡಿ): ಕಟ್ಟಡ ನಿರ್ಮಾಣಕ್ಕಾಗಿ ತಂದಿಡಲಾಗಿದ್ದ ಕಬ್ಬಿಣದ ಕಂಬಿಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಎಂ.ಕೆ. ದೊಡ್ಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು ₹50,000/- ಮೌಲ್ಯದ 1 ಟನ್ ತೂಕದ ಕಬ್ಬಿಣದ ಕಂಬಿಗಳನ್ನು...
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ – ಕ್ಲೀನರ್ ಬಂಧನ, ಇಬ್ಬರು ಚಾಲಕರು ಪರಾರಿ
ನಂಜನಗೂಡು: ನಂಜನಗೂಡು – ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 60ಕ್ಕೂ ಹೆಚ್ಚು ಜಾನುವಾರುಗಳನ್ನು ದೊಡ್ಡಕವಲಂದೆ ಠಾಣೆ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಕಾರ್ಯಾಚರಣೆ ವೇಳೆ ಕ್ಯಾಂಟರ್ ಒಂದರ ಕ್ಲೀನರ್‌ನನ್ನು ಬಂಧಿಸಲಾಗಿದ್ದು, ಇಬ್ಬರು ಚಾಲಕರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಮೈಸೂರು ಮೂಲದ...
ಎಚ್‌ಎಸ್‌ಆರ್ ಲೇಔಟ್‌ನ ಐಪಿಎಸ್ ಬಡಾವಣೆಯಲ್ಲಿ ಹೈಫೈ ರೇವ್ ಪಾರ್ಟಿ: ವಿಲ್ಲಾ ಮೇಲೆ ಮಹಿಳಾ ಪೊಲೀಸ್ ಘಟಕದ ದಾಳಿ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೇವ್ ಪಾರ್ಟಿ ಸಂಸ್ಕೃತಿಗೆ ತಡೆಹಾಕಲು ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಕಿಡಿಗೇಡಿಗಳು ಹೊಸ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶ ಎನಿಸಿಕೊಂಡಿರುವ ಎಚ್‌ಎಸ್‌ಆರ್ ಲೇಔಟ್ 6ನೇ ಸೆಕ್ಟರ್‌ನ ಐಪಿಎಸ್ ಬಡಾವಣೆಯಲ್ಲಿ ನಡೆಯುತ್ತಿದ್ದ ಅಕ್ರಮ...
ಬೆಲೆಬಾಳುವ ಕಾರುಗಳಿಗೆ ನಕಲಿ RC ಕಾರ್ಡ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ – ₹1.74 ಕೋಟಿ ಮೌಲ್ಯದ 8 ಕಾರುಗಳು ವಶ
ಬೆಂಗಳೂರು: ಬೆಲೆಬಾಳುವ ಕಾರುಗಳ ಮೇಲಿರುವ ಸಾಲ (ಲೋನ್) ತೀರಿಸುವುದಾಗಿ ನಂಬಿಸಿ ವಾಹನಗಳನ್ನು ಪಡೆದು, ನಕಲಿ ಆರ್‌ಸಿ (RC) ಕಾರ್ಡ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು...
ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕಳವು: ಹೊರರಾಜ್ಯದ ಆರೋಪಿ ಬಂಧನ – ₹20 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ವಶ
ಬೆಂಗಳೂರು: ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್-7 ರಲ್ಲಿರುವ ಎಲೆಕ್ಟ್ರಾನಿಕ್ ಮಳಿಗೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಪೊಲೀಸರು, ಹೊರರಾಜ್ಯ ಮೂಲದ ಆರೋಪಿಯನ್ನು ಬಂಧಿಸಿ, ಆತನಿಂದ ₹20 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ 09 ಲ್ಯಾಪ್‌ಟಾಪ್‌ಗಳು,...
ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಕಿರುಕುಳ ನೀಡಿದ್ದ ಹಣ್ಣಿನ ವ್ಯಾಪಾರಿ ಬಂಧನ
ಬೆಂಗಳೂರು: ರಾಮಮೂರ್ತಿನಗರದಲ್ಲಿ ರಸ್ತೆಬದಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್ ನಿವಾಸಿ, ಹಣ್ಣಿನ ವ್ಯಾಪಾರಿಯಾಗಿರುವ 42 ವರ್ಷದ ವಿಜಯ್ ರಾಘವ್ ಬಂಧಿತ ಆರೋಪಿ. ರಸ್ತೆಯಲ್ಲಿ...
ಟೆಕ್ಕಿ ಮನೆಗೆ ನುಗ್ಗಿ ಏರ್‌ಗನ್ ತೋರಿಸಿ ದರೋಡೆ – ಇಬ್ಬರು ಖತರ್ನಾಕ್ ಆರೋಪಿಗಳ ಬಂಧನ
ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ (ಟೆಕ್ಕಿ) ಅವರ ಮನೆಗೆ ಅಕ್ರಮವಾಗಿ ನುಗ್ಗಿ, ಏರ್‌ಗನ್ ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಶ್ರಫ್ ಹಾಗೂ ಅಪ್ಜಲ್ ಅಲಿಯಾಸ್ ಡಿಚ್ಚಿ ಎಂದು...
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಡುಹಂದಿ ಬೇಟೆ: ಓರ್ವ ಆರೋಪಿ ಬಂಧನ, ಮೂವರು ಪರಾರಿ
ಹನೂರು: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾಡುಹಂದಿ ಬೇಟೆಯಾಡಲು ಯತ್ನಿಸುತ್ತಿದ್ದ ನಾಲ್ವರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಅನ್ವಿತ್ (26) ಬಂಧಿತ...