Share News

ಕಲಬುರಗಿ (ಯಡ್ರಾಮಿ): ಯಡ್ರಾಮಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೀರೆತ್ತುವ ಮೋಟಾರ್‌ ಪಂಪ್‌, ಮೋಟಾರ್‌ ಸ್ಟಾರ್ಟರ್ ಹಾಗೂ ಕೇಬಲ್‌ ವೈರ್ ಕಳ್ಳತನ ಮಾಡುತ್ತಿದ್ದ 3 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

​ಸೊತ್ತುಗಳ ಜಪ್ತಿ ಹಾಗೂ ನ್ಯಾಯಾಂಗ ಬಂಧನ:

ಬಂಧಿತ ಆರೋಪಿಗಳಿಂದ ಒಟ್ಟು ₹ 5 ನೀರೆತ್ತುವ ಮೋಟಾರ್‌ ಪಂಪ್‌ಗಳು, 3 ಮೋಟಾರ್‌ ಸ್ಟಾರ್ಟರ್‌ಗಳು ಹಾಗೂ ಕೇಬಲ್‌ ವೈರ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

​ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆ:

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು, IPS ರವರು ಉಪಸ್ಥಿತರಿದ್ದು, ಸರಣಿ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯಾಚರಣೆಯನ್ನು ಶ್ಲಾಘಿಸಿ ಪ್ರಶಂಸಿದ್ದಾರೆ.


Share News