Share News

ಬೆಂಗಳೂರು: ದೇಶಾದ್ಯಂತ ಅಡುಗೆ ಅನಿಲ (LPG) ಬಳಕೆದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಗ್ಯಾಸ್ ಕಂಪನಿಗಳು ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತಂದಿದ್ದು, ಇನ್ಮುಂದೆ ಗ್ರಾಹಕರು ನಿರ್ದಿಷ್ಟ ಸಮಯದ ಮಿತಿಯಲ್ಲೇ ಸಿಲಿಂಡರ್ ಕಾಯ್ದಿರಿಸಬೇಕಾಗುತ್ತದೆ. ಗ್ಯಾಸ್ ವಿತರಣೆಯಲ್ಲಿನ ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ಮೊದಲು ಗ್ರಾಹಕರು ದಿನದ 24 ಗಂಟೆಯೂ ಯಾವುದೇ ಸಮಯದಲ್ಲಿ ಸಿಲಿಂಡರ್ ಬುಕ್ ಮಾಡಬಹುದಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಬುಕ್ಕಿಂಗ್ ಪ್ರಕ್ರಿಯೆಗೆ ಸಮಯದ ಮಿತಿ ವಿಧಿಸಲಾಗಿದೆ.

ಬೆಳಿಗ್ಗೆ: 5:00 ರಿಂದ 7:00 ರವರೆಗೆ ಮಾತ್ರ.

ರಾತ್ರಿ: 8:00 ರಿಂದ 12:00 ರವರೆಗೆ ಮಾತ್ರ.

ಗಮನಿಸಿ: ಬೆಳಿಗ್ಗೆ 7:00 ರಿಂದ ರಾತ್ರಿ 8:00 ರವರೆಗೆ ಬುಕ್ಕಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಆದ್ದರಿಂದ ಗ್ರಾಹಕರು ತಮ್ಮ ಗ್ಯಾಸ್ ಖಾಲಿಯಾಗುವ ಮೊದಲೇ ಈ ಸಮಯದ ಅವಧಿಯಲ್ಲಿ ಬುಕ್ಕಿಂಗ್ ಮಾಡಲು ಯೋಜನೆ ರೂಪಿಸಿಕೊಳ್ಳಬೇಕಿದೆ.

ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆಯೆಂದರೆ ‘ದಿನಗಳ ಅಂತರ’. ಒಮ್ಮೆ ಸಿಲಿಂಡರ್ ವಿತರಣೆಯಾದ (Delivery) ದಿನದಿಂದ ಕನಿಷ್ಠ 25 ದಿನಗಳು ಕಳೆದ ನಂತರವಷ್ಟೇ ಮುಂದಿನ ಬುಕ್ಕಿಂಗ್ ಮಾಡಲು ಸಾಧ್ಯ. ಒಂದು ವೇಳೆ 25 ದಿನಗಳಿಗಿಂತ ಮುಂಚಿತವಾಗಿ ಬುಕ್ ಮಾಡಲು ಪ್ರಯತ್ನಿಸಿದರೆ, ಸಾಫ್ಟ್‌ವೇರ್ ವ್ಯವಸ್ಥೆಯು ಅದನ್ನು ಸ್ವಯಂಚಾಲಿತವಾಗಿ ತಿರಸ್ಕರಿಸುತ್ತದೆ.

ಗ್ರಾಹಕರ ಅನುಕೂಲಕ್ಕಾಗಿ WhatsApp ಮತ್ತು SMS ಮೂಲಕ ಸುಲಭವಾಗಿ ಬುಕ್ ಮಾಡಲು ಅವಕಾಶ ನೀಡಲಾಗಿದೆ:

ಭಾರತ್ ಗ್ಯಾಸ್ 1800224344 (“Hi” ಎಂದು ಕಳುಹಿಸಿ)

ಇಂಡೇನ್ ಗ್ಯಾಸ್ 75888-88824 (“REFILL” ಎಂದು ಕಳುಹಿಸಿ)

HP ಗ್ಯಾಸ್ 92222-01122 (“BOOK” ಎಂದು ಕಳುಹಿಸಿ)

ಸ್ಮಾರ್ಟ್‌ಫೋನ್ ಇಲ್ಲದವರಿಗೆ ಮಿಸ್ಡ್ ಕಾಲ್ ಸೌಲಭ್ಯ:

ಇಂಟರ್ನೆಟ್ ಅಥವಾ ಸ್ಮಾರ್ಟ್‌ಫೋನ್ ಬಳಸದ ಗ್ರಾಹಕರು ಈ ಕೆಳಗಿನ ಸಂಖ್ಯೆಗಳಿಗೆ ಮಿಸ್ಡ್ ಕಾಲ್ ನೀಡುವ ಮೂಲಕವೂ ಬುಕ್ಕಿಂಗ್ ಮಾಡಬಹುದು:

ಭಾರತ್ ಗ್ಯಾಸ್: 77180-12345

ಇಂಡೇನ್: 84549-55555

HP ಗ್ಯಾಸ್: 949360-22222

ಯಾವುದೇ ದೂರು ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ಈ ಕೆಳಗಿನ ಟೋಲ್-ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಇಂಡೇನ್ / HP ಗ್ಯಾಸ್: 1800-233-3555

ಭಾರತ್ ಗ್ಯಾಸ್: 1800-224-344

ಅನಗತ್ಯವಾಗಿ ಹೆಚ್ಚುವರಿ ಸಿಲಿಂಡರ್ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಗ್ಯಾಸ್ ಮಾರಾಟವಾಗುವುದನ್ನು ತಡೆಯಲು ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.


Share News