Share News

ಬೆಂಗಳೂರು: ರಾಜಸ್ತಾನ ಮೂಲದ ಮೂವರು ಯುವಕರಿದ್ದ ಗ್ಯಾಂಗ್‌ ಮಾಗಡಿ ರಸ್ತೆಯ ಬಳಿ ಸ್ಥಳೀಯ ಯುವತಿಯನ್ನು ಕಿಡ್ನಾಪ್ ಮಾಡಿ, ಕೊನೆಗೆ ಸ್ಥಳೀಯರ ಚಾಣಾಕ್ಷತನದಿಂದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸಿಕ್ಕಿಬಿದ್ದಿರುವ ಭೀಕರ ಘಟನೆ ನಡೆದಿದೆ.

​ಹುಂಡೈ ವೆನ್ಯೂ ಕಾರಿನಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಿ ಆರೋಪಿಗಳು ಅತಿವೇಗದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದರು. ಈ ವೇಳೆ ಕಾರಿನೊಳಗಿನಿಂದ ಯುವತಿ ಗಟ್ಟಿಯಾಗಿ ಚೀರಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಬೈಕ್ ಹಾಗೂ ಕಾರುಗಳಲ್ಲಿ ಆ ಕಾರನ್ನು ಚೇಸ್ ಮಾಡಲು ಶುರುಮಾಡಿದ್ದಾರೆ.

​ಸ್ಥಳೀಯರ ಚೇಸಿಂಗ್‌ನಿಂದ ಹೆದರಿದ ಕಿಡ್ನಾಪರ್‌ಗಳು ಎಸ್ಕೇಪ್ ಆಗಲು ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದಾರೆ. ಆದರೂ ಬಿಡದ ಸಾರ್ವಜನಿಕರು ವಿಜಯನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಕಾರನ್ನು ಅಡ್ಡಗಟ್ಟಿ, ಕಿಡ್ನಾಪರ್‌ಗಳನ್ನು ಹಿಡಿದು ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಪೊಲೀಸರು ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕಿಡ್ನಾಪ್‌ಗೆ ನಿಖರ ಕಾರಣವೇನು ಎಂಬ ಕುರಿತು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ.


Share News