Share News

ನಾಗಮಂಗಲ: ನಾಗಮಂಗಲ ತಾಲೂಕು ಕಚೇರಿಯಲ್ಲಿ ಸರಕಾರಿ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

​ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಈ ರೀತಿ ಪ್ರಮುಖ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿಬಂದಿವೆ. ಸರ್ಕಾರಿ ದಾಖಲೆಗಳು ಸಾರ್ವಜನಿಕ ಆಡಳಿತದ ಪ್ರಮುಖ ಸಾಕ್ಷ್ಯಗಳಾಗಿದ್ದು, ಅವುಗಳನ್ನು ನಿಯಮಾನುಸಾರ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ.

​ದಾಖಲೆ ನಾಶದ ಪ್ರಕ್ರಿಯೆಯು ನಿಯಮಾವಳಿಗಳ ಪ್ರಕಾರ ನಡೆದಿದೆಯೇ, ಸೂಕ್ತ ಅನುಮತಿ ಪಡೆಯಲಾಗಿದೆಯೇ ಮತ್ತು ದಾಖಲೆಗಳ ಸಂರಕ್ಷಣಾ ಅವಧಿ ಮುಗಿದಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಬೇಕಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಅಸಲಿ ಸತ್ಯಾಸತ್ಯತೆಯನ್ನು ಹೊರತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

​(ಗಮನಿಸಿ: ಈ ವರದಿಯು ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಅರಿವಿನ ಉದ್ದೇಶದಿಂದ ಪ್ರಕಟಿಸಲಾಗಿದ್ದು, ಆರೋಪಗಳು ಸಾಬೀತಾಗುವವರೆಗೆ ಇವುಗಳನ್ನು ಬರಿ ಆರೋಪಗಳೆಂದೇ ಪರಿಗಣಿಸತಕ್ಕದ್ದು).


Share News