Share News

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ನಟ ಹಾಗೂ ಟಿವಿಕೆ (TVK) ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಮೊದಲ ಹೆಜ್ಜೆಯಲ್ಲೇ ರಾಜ್ಯಪಾಲರು ಶಾಕ್ ನೀಡಿದ್ದಾರೆ. ನಾಳೆ (ಗುರುವಾರ) ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭ ಅನಿಶ್ಚಿತತೆಯ ಕಾರ್ಮೋಡದಲ್ಲಿ ಸಿಲುಕಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118. ಆದರೆ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಹುಮತಕ್ಕೆ ಇನ್ನು 10 ಸ್ಥಾನಗಳ ಕೊರತೆಯಿದ್ದ ಕಾರಣ, ವಿಜಯ್ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲ ಕೋರಿದ್ದರು.

ರಾಜ್ಯಪಾಲರ ಆಕ್ಷೇಪಕ್ಕೆ ಕಾರಣಗಳೇನು?

​ಬೆಂಬಲ ಪತ್ರದ ಕೊರತೆ: ಕಾಂಗ್ರೆಸ್ (5 ಸ್ಥಾನ) ಬೆಂಬಲ ಘೋಷಿಸಿದರೂ, ಬಹುಮತಕ್ಕೆ ಇನ್ನು 5 ಸ್ಥಾನಗಳ ಅಗತ್ಯವಿದೆ. ಸಿಪಿಐ, ಸಿಪಿಎಂ ಮತ್ತು ವಿಸಿಕೆ ಪಕ್ಷಗಳು ಬೆಂಬಲ ನೀಡುತ್ತವೆ ಎನ್ನಲಾಗಿದ್ದರೂ, ರಾಜ್ಯಪಾಲರಿಗೆ ಸಲ್ಲಿಸಿದ ಹಕ್ಕು ಮಂಡನೆ ಪತ್ರದಲ್ಲಿ ಈ ಪಕ್ಷಗಳ ಅಧಿಕೃತ ಸಹಿ ಇಲ್ಲದಿರುವುದು ತಡೆಗೆ ಕಾರಣವಾಗಿದೆ.

​ಮೌಖಿಕ ಭರವಸೆ ಸಾಲದು: ವಿಜಯ್ ಅವರು 118 ಶಾಸಕರ ಬೆಂಬಲವಿದೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ಸಲ್ಲಿಸುವಂತೆ ಸೂಚಿಸಿ, ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಿದ್ದಾರೆ.

​”ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎನ್ನುವಂತೆ, ಕಾಂಗ್ರೆಸ್ ಮೈತ್ರಿ ಸಿಕ್ಕರೂ ತಾಂತ್ರಿಕ ಕಾರಣಗಳಿಂದಾಗಿ ವಿಜಯ್ ಅವರ ನಾಳೆಯ ‘ಪಟ್ಟಾಭಿಷೇಕ’ ಸದ್ಯಕ್ಕೆ ಮುಂದೂಡಲ್ಪಟ್ಟಿದೆ.

 


Share News