ಗದಗ: ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್‌ಪಿ) ಮಿಥುನ್ ಎಚ್.ಎನ್., ಐಪಿಎಸ್ ಅವರು ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ತಮ್ಮ ಭೇಟಿಯ ವೇಳೆ ಘಟಕದ ಆಯುಧಾಗಾರ, ಶ್ವಾನದಳ ಹಾಗೂ ವಾಹನ ವಿಭಾಗಗಳನ್ನು ಪರಿಶೀಲಿಸಿದ ಎಸ್‌ಪಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ಇಲಾಖೆಯಲ್ಲಿ ಶಿಸ್ತು, ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯುತ ಮನೋಭಾವದಿಂದ ಕೆಲಸ ಮಾಡುವುದು ಅತ್ಯಗತ್ಯ. ನಿರಂತರ ಕರ್ತವ್ಯದ ನಡುವೆಯೂ ಸಿಬ್ಬಂದಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಲ್ಲಸಮುದ್ರದಲ್ಲಿರುವ ಪೊಲೀಸ್ ವಸತಿ ಸಮುಚ್ಛಯಕ್ಕೂ ಭೇಟಿ ನೀಡಿದ ಎಸ್‌ಪಿ ಮಿಥುನ್ ಎಚ್.ಎನ್. ಅವರು ಪರಿಶೀಲನೆ ಕೈಗೊಂಡರು. ಈ ಸಂದರ್ಭದಲ್ಲಿ ಡಿಎಆರ್ ಘಟಕದ ವಿವಿಧ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Arakshakara Times Media
ANTONY RAJU. A (M. A, Diploma in Journalism )
Editor In Chief / Journalist.
ARAKSHAKARA TIMES MEDIA
KARNATAKA