ಬೆಂಗಳೂರು: ತರಬೇತಿ ಪೂರ್ಣಗೊಳಿಸಿದ ಕರ್ನಾಟಕ ಕೇಡರ್‌ನ 2023 ಮತ್ತು 2024ನೇ ಬ್ಯಾಚ್‌ನ ನಾಲ್ವರು ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮೊದಲ ಪೋಸ್ಟಿಂಗ್ ನೀಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆಯಾ ಉಪವಿಭಾಗಗಳಿಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಎಎಸ್‌ಪಿ) ನಿಯೋಜಿಸಲಾಗಿದೆ.
ನೂತನ ಎಎಸ್‌ಪಿಗಳು ಮತ್ತು ನಿಯೋಜಿತ ಸ್ಥಳಗಳು:
ಡಾ. ಭಾನು ಪ್ರಕಾಶ್ .ಜೆ: ಎಎಸ್‌ಪಿ, ತೀರ್ಥಹಳ್ಳಿ ಉಪವಿಭಾಗ (ಶಿವಮೊಗ್ಗ ಜಿಲ್ಲೆ)
ಇಶಿತಾ ಗುಪ್ತಾ: ಎಎಸ್‌ಪಿ, ಕಾರ್ಕಳ ಉಪವಿಭಾಗ (ಉಡುಪಿ ಜಿಲ್ಲೆ)
ಅನನ್ಯ ಶ್ರೀವಾಸ್ತವ್: ಎಎಸ್‌ಪಿ, ಹುಬ್ಬಳ್ಳಿ ಗ್ರಾಮಾಂತರ ಉಪವಿಭಾಗ (ಧಾರವಾಡ ಜಿಲ್ಲೆ)
ರಾನು ಗುಪ್ತಾ: ಎಎಸ್‌ಪಿ, ಭಟ್ಕಳ ಉಪವಿಭಾಗ (ಉತ್ತರ ಕನ್ನಡ ಜಿಲ್ಲೆ)
ರಾಜ್ಯಪಾಲರ ಆದೇಶದ ಮೇರೆಗೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಈ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ:
ಕಳೆದ ಶನಿವಾರವಷ್ಟೇ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪೊಲೀಸ್ ಆಯುಕ್ತರು ಸೇರಿದಂತೆ 15 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಪ್ರಮುಖ ವರ್ಗಾವಣೆಗಳ ವಿವರ:
ಪಿ. ಹರಿಶೇಖರನ್: ಎಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ
ಎಂ. ನಂಜುಂಡಸ್ವಾಮಿ: ಎಡಿಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ
ದೇವಜ್ಯೋತಿ ರೇ: ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ವಿಭಾಗ
ಶಿವಪ್ರಕಾಶ್ ದೇವರಾಜ್: ಮಾದಕ ವಸ್ತು ನಿಗ್ರಹ ಕಾರ್ಯಪಡೆ
ಭೂಷಣ್ ಬೊರಸೆ: ಆಯುಕ್ತರು, ಹುಬ್ಬಳ್ಳಿ-ಧಾರವಾಡ
ನಿಕ್ಕಂ ಪ್ರಕಾಶ್ ಅಮೃತ್: ಆಯುಕ್ತರು, ಬೆಳಗಾವಿ
ಅಮಿತ್ ಸಿಂಗ್: ಐಜಿಪಿ, ಕೆಎಸ್‌ಆರ್‌ಪಿ
ಆರ್. ಚೇತನ್: ಡಿಐಜಿ, ಪಶ್ಚಿಮ ವಲಯ
ಪದ್ಮಿನಿ ಸಾಹೋ: ಎಸ್ಪಿ, ಚಿಕ್ಕಬಳ್ಳಾಪುರ
ಆರ್. ಶ್ರೀನಿವಾಸಗೌಡ: ಡಿಸಿಪಿ, ಸಿಸಿಬಿ-1
ಡಾ. ಶಿವಕುಮಾರ್: ಎಸ್ಪಿ, ಲೋಕಾಯುಕ್ತ
ಕುಶಾಲ್ ಚೌಕ್ಸಿ: ಡಿಸಿಪಿ (ಆಡಳಿತ), ಬೆಂಗಳೂರು ನಗರ
ಸಾಹಿಲ್ ಬಗ್ಲಾ: ಎಸ್ಪಿ, ಕೊಪ್ಪಳ
ರೋಹನ್ ಜಗದೀಶ್: ಎಸ್ಪಿ, ಬೆಂಗಳೂರು ದಕ್ಷಿಣ
ಎಚ್.ಎನ್. ಮಿಥುನ್: ಎಸ್ಪಿ, ಗದಗ