ಬೆಂಗಳೂರು: ಸ್ವಂತ ಬಳಕೆಗಾಗಿ (ಸಾರೇತರ ವರ್ಗದಲ್ಲಿ) ನೋಂದಣಿ ಮಾಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳನ್ನು ನಿಯಮಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕಾಗಿ (ಬೈಕ್ ಟ್ಯಾಕ್ಸಿ) ಬಳಸುತ್ತಿದ್ದ ವಾಹನಗಳ ವಿರುದ್ಧ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.
ವಿಶೇಷ ತಪಾಸಣಾ ಅಭಿಯಾನದ ಭಾಗವಾಗಿ 2026ರ ಆಗಸ್ಟ್ 05ರಂದು ನಗರದ ವಿವಿಧೆಡೆ ನಡೆಸಿದ ದಿಢೀರ್ ತಪಾಸಣೆ ವೇಳೆ, ಕಾನೂನು ಉಲ್ಲಂಘಿಸಿ ಅನಧಿಕೃತವಾಗಿ ರಸ್ತೆಗಿಳಿದಿದ್ದ ಒಟ್ಟು 263 ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಸಾರಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಮುಂಬರುವ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಹಾಗೂ ತಪಾಸಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ.
Arakshakara Times Media
ANTONY RAJU. A (M. A, Diploma in Journalism )
Editor In Chief / Journalist.
ARAKSHAKARA TIMES MEDIA
KARNATAKA