Share News

ಮಾಲೂರು: ಬಸ್ ಏರುವ ಗಡಿಬಿಡಿಯಲ್ಲಿ ಸಾರ್ವಜನಿಕರ ಗಮನ ಬೇರೆಡೆ ಇದ್ದಾಗ ನಯವಾಗಿ ಕತ್ತಿನಿಂದ ಚಿನ್ನದ ಸರ ಎಗರಿಸುತ್ತಿದ್ದ ತಮಿಳುನಾಡು ಮೂಲದ ಕಿಲಾಡಿ ಕಳ್ಳಿಯನ್ನು ಮಾಲೂರು ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ತಮಿಳುನಾಡು ಮೂಲದ ಮದು ಅಲಿಯಾಸ್ ವಿಜಯ (38) ಬಂಧಿತ ಆರೋಪಿ.

​ಬಸ್ ನಿಲ್ದಾಣದಲ್ಲಿ ಕಳವು: ಸಂತ್ರಸ್ತೆ ಗಿರಿಜಾ ಎಂಬುವವರು ಮಾಲೂರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಹತ್ತುತ್ತಿದ್ದಾಗ, ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಸಂದಣಿಯ ಲಾಭ ಪಡೆದ ಆರೋಪಿ ವಿಜಯ, ಅವರ ಕರಳಿನಲ್ಲಿದ್ದ ಚಿನ್ನದ ಸರವನ್ನು ಕತ್ತರಿಸಿ ಪರಾರಿಯಾಗಿದ್ದಳು.

​ದೂರು ದಾಖಲು: ಸರ ಕಳೆದುಕೊಂಡ ಗಿರಿಜಾ ನೀಡಿದ ದೂರಿನನ್ವಯ ಮಾಲೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

​6 ಲಕ್ಷ ಮೌಲ್ಯದ ಚಿನ್ನ ಜಪ್ತಿ: ತನಿಖೆ ಕೈಗೆತ್ತಿಕೊಂಡ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿ, ಆಕೆಯಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 38 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

​ಬಸ್ ಹಾಗೂ ರೈಲು ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ತಮ್ಮ ಬೆಲೆಬಾಳುವ ಆಭರಣಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.


Share News