ಆನೇಕಲ್: ಹುಲ್ಲಹಳ್ಳಿ ಹಾಗೂ ಬೇಗೂರು-ಕೊಪ್ಪ ರಸ್ತೆಯಲ್ಲಿರುವ ಕ್ರೈಸ್ಟ್ ಅಕಾಡೆಮಿಯ ಆಫೀಸ್ ಇಂಚಾರ್ಜ್ ಜೋಸೆಫ್. ಪಿ.ವಿ (28) ಅವರು ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯು ಕೊಪ್ಪ ಗೇಟ್ ಸಮೀಪದ ಕೆಂಪಾಪುರ ಪೆಟ್ರೋಲ್ ಬಂಕ್ ಬಳಿ ರಾತ್ರಿ ಸುಮಾರು 11:30 ರ ವೇಳೆಗೆ ಸಂಭವಿಸಿದೆ. ಜೋಸೆಫ್ ಅವರು ಹೆಲ್ಮೆಟ್ ಧರಿಸಿದ್ದಾಗ್ಯೂ, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವ್ಯಕ್ತಿ ವಿವರ:
ಮೃತ ಜೋಸೆಫ್ ಅವರು ಮೂಲತಃ ಮಂಗಳೂರು ಮೂಲದ ಪುತ್ತೂರು ತಾಲೂಕಿನ ನಿವಾಸಿಯಾಗಿದ್ದು, ವರ್ಗಿಸ್ ಹಾಗೂ ಶ್ಯಾನಿ ದಂಪತಿಯ ಪುತ್ರ. ಬೆಂಗಳೂರಿಗೆ ಬಂದು ಒಂದೂವರೆ ವರ್ಷವಾಗಿದ್ದ ಇವರು ಆನೇಕಲ್ ತಾಲೂಕಿನ ಸೂಪಹಳ್ಳಿಯಲ್ಲಿ ನೆಲೆಸಿದ್ದು, ಕ್ರೈಸ್ಟ್ ಅಕಾಡೆಮಿಯಲ್ಲಿ ಆಫೀಸ್ ಇಂಚಾರ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೂರ್ಣಪ್ರಮಾಣದ ತನಿಖೆಯ ಬಳಿಕ ಅಪಘಾತಕ್ಕೆ ನಿಖರ ಕಾರಣ ಬೆಳಕಿಗೆ ಬರಬೇಕಿದೆ.
ವರದಿ :- ಪ್ರದೀಪ್ ರಾಜ್ ಕ್ರೈಂ ರಿಪೋರ್ಟರ್


Arakshakara Times Media
Related posts
