ಕೋತಿ ಮಾಡಿದ ಕೀಟಲೆಗೆ ಬಲಿಯಾದ ಅಮಾಯಕ ಜೀವ: ಹೆಜ್ಜೇನು ದಾಳಿಗೆ ಸುಜುಕಿ ಶೋರೂಂ ಸೂಪರ್‌ವೈಸರ್ ಸಾವು!
ತುಮಕೂರು: ಪ್ರಾಣಿಯೊಂದು ಮಾಡಿದ ಕಿಡಿಗೇಡಿತನಕ್ಕೆ ದಾರಿಹೋಕ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ತುಮಕೂರು ನಗರದ ಮಾರುತಿ ನಗರದಲ್ಲಿ ನಡೆದಿದೆ. ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಕೋತಿಯೊಂದು ಕೀಟಲೆ ಮಾಡಿದ ಪರಿಣಾಮ, ಕೆರಳಿದ ಜೇನುನೊಣಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಒಬ್ಬರ ಸಾವಿಗೆ...
ಬಜಪೆ: ಫಾರ್ಚೂನರ್ ಕಾರಿನಲ್ಲಿ ಅಕ್ರಮ ದನ ಸಾಗಾಟ; ಇಬ್ಬರ ಬಂಧನ, ₹8.42 ಲಕ್ಷದ ಸೊತ್ತು ವಶ
ಮಂಗಳೂರು: ಕಾರಿನಲ್ಲಿ ದನಗಳ ಕಾಲು ಕಟ್ಟಿ ಅತ್ಯಂತ ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಜಪೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 8.42 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 18ರಂದು ಮುಂಜಾನೆ ಸುಮಾರು...
ಅಳಿಯನ ಹೊಸ ಮನೆಯ ನಡುಮನೆಯಲ್ಲೇ ಮಗಳ ಅಂತ್ಯಸಂಸ್ಕಾರ: ಪಾವಗಡದಲ್ಲಿ ತಂದೆಯ ಆಕ್ರೋಶದ ಪರಾಕಾಷ್ಠೆ!
ಪಾವಗಡ: ಮಗಳ ಸಾವಿನಿಂದ ಕಂಗಾಲಾದ ತಂದೆಯೊಬ್ಬರು, ಅಳಿಯನ ನಿರ್ಮಾಣ ಹಂತದ ಮನೆಯ ನಡುಮನೆಯಲ್ಲೇ ಗುಂಡಿ ತೆಗೆದು ಮಗಳ ಮೃತದೇಹವನ್ನು ಹೂತಿಟ್ಟ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಭಾರೀ ಹೈಡ್ರಾಮಾ...
ಗ್ರಾಮೀಣ ಪ್ರತಿಭೆಯ ಅಭೂತಪೂರ್ವ ಸಾಧನೆ: ನಂಜನಗೂಡಿನ ರಮ್ಯಾ ಆರ್. ನ್ಯಾಯಾಧೀಶರಾಗಿ ಆಯ್ಕೆ
ನಂಜನಗೂಡು: ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಎಂತಹ ಶಿಖರವನ್ನಾದರೂ ಏರಬಲ್ಲರು ಎಂಬುದಕ್ಕೆ ತಾಲೂಕಿನ ಕಿರಗುಂದ ಗ್ರಾಮದ ರಮ್ಯಾ ಆರ್. ಅವರು ಸಾಕ್ಷಿಯಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಗುರಿಯತ್ತ ಸಾಗಿದ ರಮ್ಯಾ ಅವರು ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಮಹಿಳಾ ಸಬಲೀಕರಣಕ್ಕೆ...
ಸಿನಿಮೀಯ ಸ್ಟೈಲ್‌ನಲ್ಲಿ ಲೋಕಾಯುಕ್ತ ದಾಳಿ: 15 ಕಿ.ಮೀ ಬೆನ್ನಟ್ಟಿ ಲಂಚಬಾಕ ಮಹಿಳಾ ಅಧಿಕಾರಿಯ ಬಂಧನ
ಕೋಲಾರ: ಲಂಚದ ಹಣದೊಂದಿಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿಯನ್ನು ಲೋಕಾಯುಕ್ತ ಪೊಲೀಸರು ಬರೋಬ್ಬರಿ 15 ಕಿಲೋಮೀಟರ್ ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ಕೋಲಾರದ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ, ನಿವೃತ್ತ ‘ಡಿ’ ಗ್ರೂಪ್...
ಸಮಾಧಾನ ಮಹೋತ್ಸವ’ದ ವಿರುದ್ಧ ಅಪಪ್ರಚಾರ: ಹಿಂದೂ ಜಾಗರಣ ವೇದಿಕೆ ಹೇಳಿಕೆಗೆ ಸ್ಟ್ಯಾನಿ ಪಿಂಟೋ ತೀವ್ರ ಖಂಡನೆ
ಬೆಂಗಳೂರು/ಉಡುಪಿ: ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ಆಯೋಜಿಸಲಾಗಿರುವ ‘ಸಮಾಧಾನ ಮಹೋತ್ಸವ’ ಪ್ರಾರ್ಥನಾ ಕೂಟದ ವಿರುದ್ಧ ಹಿಂದೂ ಜಾಗರಣ ವೇದಿಕೆ ನೀಡುತ್ತಿರುವ ಹೇಳಿಕೆಗಳನ್ನು ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಅವರು ತೀವ್ರವಾಗಿ...
ಕಂಪ್ಯೂಟರ್ ಅಂಗಡಿಯಲ್ಲಿ ಕಳ್ಳತನ, ಜಾಡು ಹಿಡಿದ ಆರಕ್ಷಕರಿಗೆ ಅಪ್ಪ – ಮಗನೆ ಆರೋಪಿಯೆಂಬ ಅಚ್ಚರಿ, ಇದು ದಾರಿ ತೋರಿಸಬೇಕಾದ ತಂದೆಯೇ ದಿಕ್ಕು ತಪ್ಪಿಸಿದ ಕಥೆ
ಎಚ್.ಬಿ.ಆರ್ ಲೇಔಟ್‌ನಲ್ಲಿರುವ ಕಂಪ್ಯೂಟರ್ ಬಿಡಿಭಾಗಗಳ ಅಂಗಡಿಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ ತಂದೆ ಮತ್ತು ಮಗನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 80 ಲಕ್ಷ ಮೌಲ್ಯದ 444 DDR(4) ರ‍್ಯಾಮ್‌ಗಳು, 279 ಎಸ್‌ಎಸ್‌ಡಿ ಹಾರ್ಡ್ ಡಿಸ್ಕ್‌ಗಳು...
ಮದುವೆ – ಸಮಾರಂಭಗಳಿಗೆ ಒಡವೆಗಳಿಂದ ಶೃಂಗಾರ ಮಾಡಿಕೊಳ್ಳುತೀರ, ಎಚ್ಚರ ತಪ್ಪಿದ್ರೆ ಎಗರಿಸಿ ಬಿಡುವ ಅಸಾಮಿ ಅಂದರ್, ಇದು ಸದಾಶಿವನಗರ ಪೊಲೀಸರ ಸಾಹಸಗಾಥೆ
ಮದುವೆ ಮನೆ ಹಾಗೂ ಕಲ್ಯಾಣ ಮಂಟಪಗಳಿಗೆ ಬರುವ ಸಾರ್ವಜನಿಕರನ್ನೇ ಗುರಿಯಾಗಿಸಿಕೊಂಡು ಮಕ್ಕಳ ಚಿನ್ನಾಭರಣ ಹಾಗೂ ವಾಹನಗಳನ್ನು ಕಳುವು ಮಾಡುತ್ತಿದ್ದ ಓರ್ವ ಅಂತರ ಜಿಲ್ಲಾ ಕಳ್ಳನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 42.38 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ....
ಸರಣಿ ಮನೆಗಳ್ಳರ ಸಂಚು ಭೇದಿಸಿದ ಬೆಂಗಳೂರು ಕಾಪ್ಸ್, ನಂದಿನಿ ಲೇಔಟ್ ಸರಹದ್ದಿನ ಕೇಸ್ ಖಲಾಸ್, 24 ಲಕ್ಷಕ್ಕೂ ಹೆಚ್ಚಿನ ಮಾಲು ಹಿಡಿತಕ್ಕೆ
ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 24.60 ಲಕ್ಷ ಮೌಲ್ಯದ 166 ಗ್ರಾಂ ಚಿನ್ನಾಭರಣ ಹಾಗೂ 480 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ...
ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಕೈಚಳಕ, ಕದ್ದಿದ್ದು ಕರ್ನಾಟಕದಲ್ಲಿ ಸಿಕ್ಕಿದ್ದು ರಾಜಸ್ಥಾನದಲ್ಲಿ, ಹಲಸೂರುಗೇಟ್ ಪೊಲೀಸರಿಂದ ಯಶಸ್ವಿ ಅಂತರರಾಜ್ಯ ಕಾರ್ಯಾಚರಣೆ
ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂವೆಲ್ಲರಿ ಪಾಲಿಶಿಂಗ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಕೇವಲ ಒಂದು ತಿಂಗಳಲ್ಲೇ ಮಾಲೀಕನಿಗೆ ವಂಚಿಸಿ ಸುಮಾರು 12 ಕೆಜಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 10 ಕೆಜಿ 120...