Subscribe Now
Trending News

Category: ಸ್ಥಳೀಯ ಸುದ್ದಿಗಳು

ಕ್ರೈಂ ಸುದ್ದಿಗಳು

ಆನೇಕಲ್ ಸಂಚಾರ ದಟ್ಟಣೆಗೆ ಬ್ರೇಕ್: ಆನೇಕಲ್ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ! 

ಆನೇಕಲ್: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ (Traffic Jam) ನಿವಾರಣೆಗೆ ಆನೇಕಲ್ ಪೊಲೀಸ್ ಇಲಾಖೆಯು ಬಿಗಿ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾದಿ ಸುಗಮಗೊಳಿಸಿದೆ. ​ತಮಿಳುನಾಡು ಕಡೆಯಿಂದ ಆನೇಕಲ್ ಪಟ್ಟಣದೊಳಗೆ ಪ್ರವೇಶಿಸಿ ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದ...
ಕ್ರೈಂ ಸುದ್ದಿಗಳು

ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ತಡೆಗೆ ಕಠಿಣ ಕ್ರಮ: ನಗರ ಪೊಲೀಸ್ ಅಧಿಕಾರಿಗಳಿಗೆ ಹೈ ಅಲರ್ಟ್ ನಿರ್ದೇಶನ ಕೊಟ್ಟ ಗೃಹಮಂತ್ರಿ! 

ಬೆಂಗಳೂರು: ನಗರದ ಯುವ ಪೀಳಿಗೆಯ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಮತ್ತು ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ಎಲ್ಲ ಪಬ್‌ಗಳು, ಬ್ರೂವರೀಸ್, ಬಾರ್‌, ಕ್ಲಬ್‌ಗಳು, ಲಾಂಜ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ಮದ್ಯ ಮಾರಾಟ ಮಾಡುವ ಎಲ್ಲಾ...
ಜಿಲ್ಲಾ ಸುದ್ದಿಗಳು

ಸಾರ್ವಜನಿಕರ ಜೇಬಿಗೆ ಮತ್ತೊಂದು ಕತ್ತರಿ: ರಾಜ್ಯದಲ್ಲಿ ಅಕ್ಕಿ ಬೆಲೆ ದಿಢೀರ್ ಜಿಗಿತ; ಪ್ರತಿ ಕೆ.ಜಿಗೆ ₹20ರವರೆಗೆ ದರ ಹೆಚ್ಚಳ! 

ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್ ಹಾಗೂ ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಈಗ ಮತ್ತೊಂದು ಭಾರೀ ಆಘಾತ ಎದುರಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಕಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ವಿವಿಧ...
ಕ್ರೈಂ ಸುದ್ದಿಗಳು

ಆನೇಕಲ್: ಅರಣ್ಯದಲ್ಲಿ ಬೇಟೆಗೆ ಯತ್ನ; ಏಳು ಮಂದಿ ಶಿಕಾರಿಗಳ ಬಂಧನ 

ಆನೇಕಲ್: ತಟ್ಟೆಕೆರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ವನ್ಯಜೀವಿಗಳ ಬೇಟೆಯಾಡಲು ಸಂಚು ರೂಪಿಸಿದ್ದ ಏಳು ಮಂದಿ ಆರೋಪಿಗಳನ್ನು ಆನೇಕಲ್ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ​ರಾಮನಗರ ಜಿಲ್ಲೆಯ ಹಾರೋಹಳ್ಳಿ ಮೂಲದ ಮೂವರು ಹಾಗೂ ಯಾದಗಿರಿ ಜಿಲ್ಲೆಯ...
ಕ್ರೈಂ ಸುದ್ದಿಗಳು

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ: ವೃದ್ಧೆಯ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಸರಗಳ್ಳರು ಅರೆಸ್ಟ್! 

ಬೆಂಗಳೂರು: ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡು ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಅಂತರ ಜಿಲ್ಲಾ ಸರಗಳ್ಳರನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಗಳನ್ನು ಪ್ರಮೋದ್ ಬಸಪ್ಪ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ...
ಕ್ರೈಂ ಸುದ್ದಿಗಳು

ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸ್ ಕಚೇರಿಯಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಜಾಗೃತಿ ಕಾರ್ಯಕ್ರಮ 

ಬೆಂಗಳೂರು: ಮಾನ್ಯ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಬೆಂಗಳೂರು ನಗರದ ಈಶಾನ್ಯ ವಿಭಾಗದ ಪೊಲೀಸ್ ಕಚೇರಿಯಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ (World No Tobacco Day) ಅಂಗವಾಗಿ ವಿಶೇಷ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪೊಲೀಸ್...
ಟ್ರೆಂಡಿಂಗ್ ಸುದ್ದಿಗಳು

ಅಧಿಕಾರಿಗಳೊಂದಿಗೆ ನೂತನ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ: ಜನಮೆಚ್ಚುವಂತೆ ಕೆಲಸ ಮಾಡಲು ಕಟ್ಟುನಿಟ್ಟಿನ ಸೂಚನೆ 

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ವಿಧಾನಸೌಧದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪ್ರಥಮ ಹಾಗೂ ಮಹತ್ವದ ಸಭೆ ನಡೆಸಿದರು. ​ಅಧಿಕಾರಿಗಳೇ ಆಡಳಿತದ ಬೆನ್ನೆಲುಬು: ಸಭೆಯಲ್ಲಿ ಹಿರಿಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು, “ಸರ್ಕಾರದ ಸುಗಮ ಆಡಳಿತ...
ಜಿಲ್ಲಾ ಸುದ್ದಿಗಳು

ಪೊಲೀಸ್ ಠಾಣೆಯೋ ಅಥವಾ ಜ್ಞಾನ ದೇಗುಲವೋ? ಕೆಂಗೇರಿ ಠಾಣಾ ಇನ್ಸ್ಪೆಕ್ಟರ್ ಶ್ರೀ. ಜಗದೀಶ್ ಎನ್ ಅವರ ವಿನೂತನ ‘ಸ್ನೇಹಿ’ ಬದಲಾವಣೆ! 

ಸಾಮಾನ್ಯವಾಗಿ ಪೊಲೀಸ್ ಠಾಣೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ, ಗಂಭೀರ ವಾತಾವರಣ ಕಣ್ಣಮುಂದೆ ಬರುತ್ತದೆ. ಆದರೆ ರಾಜಧಾನಿಯ ಕೆಂಗೇರಿ ಪೊಲೀಸ್ ಠಾಣೆಗೆ ಒಮ್ಮೆ ಭೇಟಿ ನೀಡಿದರೆ ಈ ಕಲ್ಪನೆ ಸಂಪೂರ್ಣ ಬದಲಾಗುತ್ತದೆ. ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಹೆಸರಾಗಿರುವ ಕೆಂಗೇರಿ ಪೊಲೀಸ್...
ಜಿಲ್ಲಾ ಸುದ್ದಿಗಳು

ಕೂರ್ಗ್ ಇನ್‌ಸ್ಟಿಟ್ಯೂಟ್ ಪಿ.ಯು. ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ: ಮಾದಕ ವ್ಯಸನ ಹಾಗೂ ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಲು ಪಿಎಸ್‌ಐ ನವೀನ್ ಜಿ. ಕರೆ 

ಪೊನ್ನಂಪೇಟೆ: ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮೂಹವು ಮಾದಕ ವಸ್ತುಗಳಂತಹ ದುರ್ವ್ಯಸನಗಳಿಗೆ ಬಲಿಯಾಗದೆ, ಶಿಸ್ತುಬದ್ಧ ಜೀವನ ಹಾಗೂ ಕಠಿಣ ಪರಿಶ್ರಮದ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಪೊನ್ನಂಪೇಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ (PSI) ನವೀನ್ ಜಿ....
ಕ್ರೈಂ ಸುದ್ದಿಗಳು

ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಬ್ರೇಕ್: ನಿಯಮ ಬಾಹಿರ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಿದ ಹಾವೇರಿ ಸಂಚಾರ ಪೊಲೀಸರು 

ಹಾವೇರಿ: ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾವೇರಿ ಶಹರ ಸಂಚಾರ ಪೊಲೀಸ್‌ ಠಾಣೆಯ ವತಿಯಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದ್ವಿಚಕ್ರ ವಾಹನಗಳಿಗೆ ಅಳವಡಿಸಲಾಗಿದ್ದ ಕಾನೂನು ಬಾಹಿರ ಮತ್ತು...