ಪಬ್ಗಳ ಮೇಲೆ ಆಹಾರ ಇಲಾಖೆ ದಾಳಿ — ಕಿಚನ್ನಲ್ಲಿ ಸತ್ತ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ! ಪಬ್ಗೆ ಬೀಗ
ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಪಬ್ಗಳ ಮೇಲೆ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದು, ಪ್ರಸಿದ್ಧ ಚರ್ಚ್ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯ ಪಬ್ಗಳಲ್ಲಿ ಅತ್ಯಂತ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಚರ್ಚ್ಸ್ಟ್ರೀಟ್ನಲ್ಲಿರುವ...
ಆನೇಕಲ್ ಗೆ ಎಂಟ್ರಿ ಕೊಟ್ಟ ‘ಚಡ್ಡಿ ಗ್ಯಾಂಗ್’: ಕನ್ನ ಹಾಕಲು ಯತ್ನಿಸಿದ ಭಯಾನಕ ದೃಶ್ಯ CCTVಯಲ್ಲಿ ಸೆರೆ, ಬೆಚ್ಚಿಬಿದ್ದ ಜನರು!
ಆನೇಕಲ್ (ಬೆಂಗಳೂರು): ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ ಜನರ ನಿದ್ದೆಗೆಡಿಸಿದ್ದ ಅಪಾಯಕಾರಿ ‘ಚಡ್ಡಿ ಗ್ಯಾಂಗ್’ ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಕಾಲಿಟ್ಟಿದೆ. ಆನೇಕಲ್ ತಾಲೂಕಿನ ಲೇಔಟ್ ಒಂದರಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿದ ಸಿಸಿಟಿವಿ...
ಬೇಲೂರು: ಬಿಕ್ಕೊಡು ಭಾಗದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಚಾಲನೆ — ‘ಕ್ಯಾಪ್ಟನ್ ಪ್ರಶಾಂತ್’ ಪಡೆಯ ಗಜಪಡೆಗೆ ಪೂಜೆ ಸಲ್ಲಿಕೆ
ಹಾಸನ (ಬೇಲೂರು): ತಾಲೂಕಿನ ಬಿಕ್ಕೊಡು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯುವ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ದಸರಾ ಹಾಗೂ ಪಳಗಿದ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಾಡಾನೆಗಳ ಹಾವಳಿಯಿಂದ ತಂಪುಬಿದ್ದಿರುವ ಗ್ರಾಮಸ್ಥರಿಗೆ...
ನೆಚ್ಚಿನ ಅರಣ್ಯ ಅಧಿಕಾರಿ ವರ್ಗಾವಣೆ — ಕಂಬನಿ ಮಿಡಿದ ವನಪಾಲಕರು, ಹೂಮಳೆ ಸುರಿಸಿ ಭಾವನಾತ್ಮಕ ಬೀಳ್ಕೊಡುಗೆ!
ಚಿತ್ರದುರ್ಗ (ಮೊಳಕಾಲ್ಮೂರು): ತಾಲೂಕಿನ ವಲಯ ಅರಣ್ಯ ಅಧಿಕಾರಿ (RFO) ಶ್ರೀಯುತ ಹರ್ಷ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ, ವನಪಾಲಕರು ಹಾಗೂ ಸಾರ್ವಜನಿಕರು ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ತಮ್ಮ ನೆಚ್ಚಿನ ಹಾಗೂ ದಕ್ಷ ಅಧಿಕಾರಿಯ ಅಗಲಿಕೆಯಿಂದ ಭಾವುಕರಾದ ಸಿಬ್ಬಂದಿ...
ವಿದ್ಯುತ್ ತಂತಿ ತಾಗಿ ನವಿಲು ಬಲಿ — ನವಿಲು ತಿನ್ನಲು ಹೋಗಿ ಟ್ರಾನ್ಸ್ಫಾರ್ಮರ್ ಮೇಲೆಯೇ ಚಿರತೆ ಸಾವು!
ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಸಾವನ್ನಪ್ಪಿದ್ದು, ಆ ನವಿಲನ್ನು ತಿನ್ನಲು ಯತ್ನಿಸಿದ ಚಿರತೆಯೂ ಸಹ ವಿದ್ಯುತ್ ತಂತಿ ತಾಗಿ ದುರಂತವಾಗಿ ಮೃತಪಟ್ಟ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ. ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ಪಂಪ್ಸೆಟ್ಗೆ...
ಬೇಗೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓಡಿಸ್ಸಾ ಮೂಲದ ಮೆಕ್ಯಾನಿಕ್ ಬಂಧನ!
ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓಡಿಸ್ಸಾ ಮೂಲದ ಅಂತರರಾಜ್ಯ ಪೆಡ್ಲರ್ನನ್ನು ಬೇಗೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5,00,000 ರೂ. ಮೌಲ್ಯದ 10 ಕೆಜಿ ತೂಕದ ನಿಷೇಧಿತ ಗಾಂಜಾ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ....
ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ: ಆಟೋ ಚಾಲಕರಿಗೆ ಬೆಂಗಳೂರು ಪೊಲೀಸರ ಎಚ್ಚರಿಕೆ
ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ನಡೆಯುತ್ತಿರುವ ಕಿರುಕುಳ ಹಾಗೂ ಬೆದರಿಕೆ ಘಟನೆಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ದೌರ್ಜನ್ಯ ಎಸಗುವ ಆಟೋ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು...
ಸಾಲಿಗ್ರಾಮ: ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ – 10 ಜನರ ವಿರುದ್ಧ ಪ್ರಕರಣ ದಾಖಲು
ಸಾಲಿಗ್ರಾಮ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಆಟವಾಡುತ್ತಿದ್ದವರ ವಿರುದ್ಧ ಸಾಲಿಗ್ರಾಮ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಿನಹಳ್ಳಿ ಗ್ರಾಮದ ಬಳಿ ಕಾನೂನುಬಾಹಿರವಾಗಿ ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ತಕ್ಷಣ,...
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಬಿಗಿ ಕಣ್ಗಾವಲು: ‘ಆಪರೇಷನ್ ಮುಕ್ತ’ ಹೆಸರಿನಲ್ಲಿ ವೈಟ್ಫೀಲ್ಡ್ ಪೊಲೀಸರ ಮೆಗಾ ರೇಡ್!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವೈಟ್ಫೀಲ್ಡ್ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ‘ಆಪರೇಷನ್ ಮುಕ್ತ’ ಎಂಬ ಹೆಸರಿನಲ್ಲಿ ಶನಿವಾರ ಮುಂಜಾನೆಯಿಂದಲೇ ಈ ಮೆಗಾ ರೇಡ್ ಆರಂಭವಾಗಿದೆ. ಮುಂಜಾನೆ 5 ಗಂಟೆಯಿಂದ ಶೋಧ...
ಬೆಳಗಾವಿಯಲ್ಲಿ 6.858 ಕೆ.ಜಿ. ಗಾಂಜಾ ಚಾಕೊಲೇಟ್ ವಶ: ಉತ್ತರ ಪ್ರದೇಶ ಮೂಲದ ಆರೋಪಿ ಬಂಧನ
ಬೆಳಗಾವಿ: ನಗರದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಉದ್ಯಮಬಾಗ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಚಮ್ರುಪೂರ್ ಗ್ರಾಮದ ನಿವಾಸಿ, ಪ್ರಸ್ತುತ...
