Subscribe Now
Trending News

Category: ರಾಜ್ಯ ಸುದ್ದಿಗಳು

ಕ್ರೈಂ ಸುದ್ದಿಗಳು

ಚನ್ನರಾಯಪಟ್ಟಣ: ಮದುವೆ ಮಾಡಲಿಲ್ಲವೆಂದು ಹೆತ್ತ ತಾಯಿಯ ತಲೆಮೇಲೆ ಕಲ್ಲು ಎತ್ತಿಹಾಕಿದ ಮಗ; ಅಮಾನವೀಯ ಕೃತ್ಯ 

ಚನ್ನರಾಯಪಟ್ಟಣ: ತನಗೆ 40 ವರ್ಷ ವಯಸ್ಸಾದರೂ ಮದುವೆ ಮಾಡಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ, ಮಗನೊಬ್ಬನೇ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿರುವ ಘನಘೋರ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ನಿವಾಸಿ ಗಂಗಮ್ಮ (65)...
ಜಿಲ್ಲಾ ಸುದ್ದಿಗಳು

ಸಂಕಷ್ಟದಲ್ಲಿ ಸಿದ್ದರಾಮಯ್ಯ ಅವರ ‘ಕನಸಿನ ಯೋಜನೆ’: ಮೈಸೂರಿನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೆ ₹4.49 ಕೋಟಿ ಬಾಕಿ! 

ಮೈಸೂರು: ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ಆರಂಭವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ‘ಇಂದಿರಾ ಕ್ಯಾಂಟೀನ್’ ಯೋಜನೆ ಇದೀಗ ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 26 ಕ್ಯಾಂಟೀನ್‌ಗಳ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾದ...
ಕ್ರೈಂ ಸುದ್ದಿಗಳು

ಬೆಂಗಳೂರು: ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ದೇವಸ್ಥಾನದ ವಿವಾದ; ದೈವ ನಿಂದನೆ ಆರೋಪದಡಿ ಕೋರ್ಟ್ ಮೆಟ್ಟಿಲೇರಿದ ಪ್ರಕರಣ 

ಬೆಂಗಳೂರು: ನಗರದ ಬೇಗೂರು ವ್ಯಾಪ್ತಿಯ ಖಾಸಗಿ ವಸತಿ ಸಮುಚ್ಚಯವೊಂದರಲ್ಲಿ ಗಣೇಶ ದೇವಸ್ಥಾನದ ವಿಚಾರವಾಗಿ ಭಾರಿ ವಾಗ್ವಾದ ನಡೆದಿದ್ದು, ಪವಿತ್ರ ಸ್ಥಳಕ್ಕೆ ಅಪಚಾರವೆಸಗಿದ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿವಾಸಿಗಳ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ....
ಜಿಲ್ಲಾ ಸುದ್ದಿಗಳು

ಭದ್ರಾವತಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಖಾಸಗಿ ಬಸ್; 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು 

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಸೇತುವೆಯಿಂದ ಕೆಳಕ್ಕೆ ಬಿದ್ದಿರುವ ಆತಂಕಕಾರಿ ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರೂ, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ನಡೆದ ಈ ಅಪಘಾತದ ವೇಳೆ...
ಜಿಲ್ಲಾ ಸುದ್ದಿಗಳು

ಪಾವಗಡ: ಕುರಿಗಳ ಹಿಂಡಿನ ಮೇಲೆ ಬೀದಿ ನಾಯಿಗಳ ಭೀಕರ ದಾಳಿ; 20 ಕುರಿಗಳು ಸಾವು, ಕುರಿಗಾಹಿ ಕಂಗಾಲು 

ಪಾವಗಡ: ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಬೀದಿ ನಾಯಿಗಳ ಗುಂಪೊಂದು ಕುರಿಗಳ ಹಿಂಡಿನ ಮೇಲೆ ದಾಳಿ ನಡೆಸಿದ ಪರಿಣಾಮ ಸುಮಾರು 20 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ವೆಂಕಟೇಶ್ (ನಾರಾಯಣಪ್ಪ ಅವರ ಪುತ್ರ) ಎಂಬುವವರಿಗೆ...
ಕ್ರೈಂ ಸುದ್ದಿಗಳು

ಹುಣಸೂರು: ತೋಟದ ಮನೆಯಲ್ಲಿ ಸಿಂಥೆಟಿಕ್ ಡ್ರಗ್ಸ್ ಅಡ್ಡೆ ಮೇಲೆ ಪೊಲೀಸರ ದಾಳಿ; 25 ಕೆಜಿ ಮಾದಕ ದ್ರವ್ಯ ಜಪ್ತಿ 

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕೆಜಿಗೂ ಹೆಚ್ಚು ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಹುಣಸೂರು ತಾಲೂಕಿನ ದಾಸನಪುರ-ರತ್ನಪುರಿ ಮಾರ್ಗಮಧ್ಯೆ ಇರುವ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಈ...
ಜಿಲ್ಲಾ ಸುದ್ದಿಗಳು

ನಟ ವರುಣ್ ಧವನ್ ಪುತ್ರಿಗೆ ಅಪರೂಪದ ‘DDH’ ಕಾಯಿಲೆ: ಮಗಳ ಆರೋಗ್ಯದ ಬಗ್ಗೆ ಆತಂಕಕಾರಿ ವಿಷಯ ಬಿಚ್ಚಿಟ್ಟ ನಟ 

ಮುಂಬಯಿ: ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ತಮ್ಮ ಪುತ್ರಿ ಲಾರಾ ಅವರ ಆರೋಗ್ಯದ ಕುರಿತು ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ...
ಕ್ರೈಂ ಸುದ್ದಿಗಳು

ವಿಜಯಪುರ: ಎಣ್ಣೆಗಾಗಿ ಮೊಬೈಲ್ ಟವರ್ ಏರಿ ಕುಡುಕನ ಹೈಡ್ರಾಮಾ; ಮದ್ಯ ನೀಡುವಂತೆ ಪಟ್ಟು ಹಿಡಿದ ವ್ಯಸನಿ! 

ವಿಜಯಪುರ: ಮದ್ಯಕ್ಕಾಗಿ ವ್ಯಸನಿಯೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ. “ಮದ್ಯ ಕೊಟ್ಟರೆ ಮಾತ್ರ ಕೆಳಗೆ ಇಳಿಯುತ್ತೇನೆ” ಎಂದು ಪಟ್ಟು ಹಿಡಿದ ವ್ಯಕ್ತಿಯ ಕೃತ್ಯದಿಂದ ಗ್ರಾಮಸ್ಥರು ಕೆಲಕಾಲ ಆತಂಕಕ್ಕೀಡಾಗಿದ್ದರು. ಕೋಟ್ಯಾಳ...
ಜಿಲ್ಲಾ ಸುದ್ದಿಗಳು

ಮಂಡ್ಯ: ವಿದ್ಯುತ್ ಕಂಬದ ಮೇಲೆಯೇ ಲೈನ್‌ಮ್ಯಾನ್ ದುರ್ಮರಣ; ಗುತ್ತಿಗೆ ಕಾರ್ಮಿಕನ ಪ್ರಾಣಪಕ್ಷಿ ಹಾರಿಸಿದ ವಿದ್ಯುತ್ ಶಾಕ್ 

ಮಂಡ್ಯ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ಲೈನ್‌ಮ್ಯಾನ್ ಒಬ್ಬರು ಕಂಬದ ಮೇಲೆಯೇ ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಲ್ಲಿಗೆರೆ ಗ್ರಾಮದ ನಿವಾಸಿ ವಿಶ್ವ (55) ಎಂದು ಗುರುತಿಸಲಾಗಿದೆ....
ಕ್ರೈಂ ಸುದ್ದಿಗಳು

ಜೋಯಿಡಾ: ಕಾಂಕ್ರೀಟ್ ಪಂಪ್‌ನಲ್ಲಿ ಮದ್ಯ ಸಾಗಾಟ; ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ, ₹45 ಲಕ್ಷದ ಸ್ವತ್ತು ಜಪ್ತಿ 

ಜೋಯಿಡಾ: ಗೋವಾ-ಕರ್ನಾಟಕ ಗಡಿಭಾಗದ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾಂಕ್ರೀಟ್ ಪಂಪ್ ಯಂತ್ರದೊಳಗೆ ಅಡಗಿಸಿಟ್ಟು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಚಾಲಕನನ್ನು ಬಂಧಿಸಲಾಗಿದ್ದು, ಒಟ್ಟು ₹45 ಲಕ್ಷ...