Share News

ಮಂಗಳೂರು: ತಮ್ಮ ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಒಳಗೊಂಡ ಬ್ಯಾಗ್‌ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ಮಂಗಳೂರಿನ ಆಟೋ ಚಾಲಕ ಬಸವರಾಜ್ ಅವರು ಸಮಾಜಕ್ಕೆ ಮಾದರಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.

​ಘಟನೆಯ ವಿವರ:

​ಮಂಗಳೂರಿನ ಅಫ್ಜಿಲಾ ಎಂಬ ಮಹಿಳೆ ಹೊಸದಾಗಿ 48 ಗ್ರಾಂ ತೂಕದ ಬಂಗಾರದ ನೆಕ್ಲೇಸ್ ಖರೀದಿಸಿ, ಬಸವರಾಜ್ ಅವರ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ತಲುಪಬೇಕಾದ ಸ್ಥಳಕ್ಕೆ ಬಂದಿಳಿಯುವ ಹಡಬಡಿಯಲ್ಲಿ, ಚಿನ್ನದ ನೆಕ್ಲೇಸ್ ಇದ್ದ ಬ್ಯಾಗ್‌ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು.

​ಬಿಕರಿಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಇದ್ದ ಬ್ಯಾಗ್ ತಮ್ಮ ಆಟೋದಲ್ಲಿ ಸಿಕ್ಕರೂ, ಯಾವುದೇ ದುರಾಶೆಗೆ ಒಳಗಾಗದ ಚಾಲಕ ಬಸವರಾಜ್ ಅವರು ತಕ್ಷಣವೇ ಮಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿದ್ದಾರೆ.

​ಪೋಲಿಸರ ಸಮ್ಮುಖದಲ್ಲಿ ಹಸ್ತಾಂತರ:

​ಪೋಲಿಸರ ಮಧ್ಯಸ್ಥಿಕೆ ಹಾಗೂ ಸಹಾಯದೊಂದಿಗೆ ಬ್ಯಾಗ್‌ನ ವಾರಸುದಾರರಾದ ಅಫ್ಜಿಲಾ ಅವರನ್ನು ಪತ್ತೆಹಚ್ಚಿ, ಅವರ 48 ಗ್ರಾಂ ಚಿನ್ನದ ನೆಕ್ಲೇಸ್ ಇದ್ದ ಬ್ಯಾಗ್‌ ಅನ್ನು ಯಥಾವತ್ತಾಗಿ ಹಸ್ತಾಂತರಿಸಲಾಗಿದೆ.

​ತಮ್ಮ ಕಳೆದುಹೋದ ಚಿನ್ನದ ನೆಕ್ಲೇಸ್ ವಾಪಸ್ ಸಿಕ್ಕಿದ್ದಕ್ಕೆ ಅಫ್ಜಿಲಾ ಹಾಗೂ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ಚಾಲಕ ಬಸವರಾಜ್ ಅವರ ಈ ಪ್ರಾಮಾಣಿಕ ನಡೆಗೆ ಮಂಗಳೂರು ಪೊಲೀಸರು ಹಾಗೂ ನಾಗರಿಕರು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


Share News