ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಖ್ಯಾತ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಹುತಾತ್ಮ ಐಪಿಎಸ್ ಅಧಿಕಾರಿ ಶ್ರೀ ಟಿ. ಹರಿಕೃಷ್ಣ ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು.
ಪುಷ್ಪಾರ್ಚನೆ ಹಾಗೂ ಗೌರವ ಸಮರ್ಪಣೆ:
ಹುತಾತ್ಮ ದಿನದ ಅಂಗವಾಗಿ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್. ರವರು ಹುತಾತ್ಮ ಬಿ.ಆರ್. ಹರಿಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಅವರ ಸಮ್ಮಾನಾರ್ಥವಾಗಿ ಗೌರವ ನಮನ ಸಲ್ಲಿಸಿದರು.
ಸೇವೆಯ ಸ್ಮರಣೆ:
ನಾಡಿನ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತೃಣಸಮಾನವಾಗಿ ತೊರೆದು ಅತ್ಯುನ್ನತ ತ್ಯಾಗ ಮೆರೆದ ಟಿ. ಹರಿಕೃಷ್ಣ ಅವರ ಸಾಹಸ, ದಕ್ಷತೆ ಹಾಗೂ ಶೌರ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಪೊಲೀಸ್ ಇಲಾಖೆಗೆ ಅವರ ಕೊಡುಗೆ ಹಾಗೂ ತ್ಯಾಗ ಸದಾ ಸ್ಮರಣೀಯ ಎಂದು ಸ್ಮರಿಸಲಾಯಿತು.

Arakshakara Times Media
ANTONY RAJU. A (M. A, Diploma in Journalism )
Editor In Chief / Journalist.
ARAKSHAKARA TIMES MEDIA
KARNATAKA